ADVERTISEMENT

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಲ್ಲಿ ₹180 ಕೋಟಿ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 15:47 IST
Last Updated 16 ಜುಲೈ 2025, 15:47 IST
ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಲೋಗೊ
ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಲೋಗೊ   

ಇಸ್ಲಾಮಾಬಾದ್‌: ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಲ್ಲಿ (ಪಿಸಿಬಿ) ಸುಮಾರು ₹180 ಕೋಟಿ ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಪಾಕಿಸ್ತಾನದ ಪ್ರಧಾನ ಲೆಕ್ಕಪರಿಶೋಧಕರು ಸಿದ್ಧಪಡಿಸಿರುವ 2023–24ನೇ ಹಣಕಾಸು ವರ್ಷದ ವರದಿಯಲ್ಲಿ ಈ ವಿಚಾರ ಬಯಲಾಗಿದೆ.

ಪಿಸಿಬಿಯು ಕಾರ್ಯಕ್ರಮಗಳ ಪ್ರಾಯೋಜಕರಿಂದ 18.6 ಮಿಲಿಯನ್‌ ಡಾಲರ್‌ (₹150 ಕೋಟಿ) ಮೌಲ್ಯದ ಶುಲ್ಕ ಸಂಗ್ರಹಿಸುವಲ್ಲಿ ವಿಫಲವಾಗಿದೆ. ಜೂನಿಯರ್‌ ಕೋಚ್‌ಗಳು ಹಾಗೂ ಮಾಧ್ಯಮ ನಿರ್ದೇಶಕರ ನೇಮಕಾತಿಯಲ್ಲಿ ನಿಯಮಗಳ ಪಾಲನೆಯಾಗಿಲ್ಲ. ಅಲ್ಲದೆ, ಮಂಡಳಿಯು ಎರಡು ವರ್ಷಗಳ ಹಿಂದೆ ಆಡಳಿತಾತ್ಮಕ ಸಮಸ್ಯೆಗಳಿಗೂ ಸಿಲುಕಿತ್ತು ಎಂದು ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಬಂದಿದ್ದ ವಿದೇಶಿ ಆಟಗಾರರ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯ ಊಟೋಪಚಾರಕ್ಕೆ 2.20 ಲಕ್ಷ ಡಾಲರ್‌ (₹1.8 ಕೋಟಿ) ಖರ್ಚು ಮಾಡಿದೆ. ಲೆಕ್ಕಪರಿಶೋಧಕರ ಸಮಿತಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.