ADVERTISEMENT

ಏಷ್ಯಾ ಕಪ್ ಸೋತ ಪಾಕ್‌ಗೆ ಸರ್ಜರಿ: ಟಿ20 ತಂಡದ ನಾಯಕರಾಗ್ತಾರಾ ಶಾದಾಬ್ ಖಾನ್?

ಪಿಟಿಐ
Published 16 ಅಕ್ಟೋಬರ್ 2025, 10:51 IST
Last Updated 16 ಅಕ್ಟೋಬರ್ 2025, 10:51 IST
<div class="paragraphs"><p>ಶಾದಾಬ್ ಖಾನ್</p></div>

ಶಾದಾಬ್ ಖಾನ್

   

ಚಚಿತ್ರ: @AwaisShoukat08

ಕರಾಚಿ: ಇಂಗ್ಲೆಂಡ್‌ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪಾಕಿಸ್ತಾನ ತಂಡದ ಆಲ್‌ರೌಂಡರ್ ಶಾದಾಬ್ ಖಾನ್ ಚೇತರಿಸಿಕೊಂಡಿದ್ದು, ಪಾಕ್ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಮಾತ್ರವಲ್ಲ, ಅವರು ಪಾಕಿಸ್ತಾನ ಟಿ20 ತಂಡದ ನಾಯಕರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ADVERTISEMENT

ಶಾದಾಬ್ ಖಾನ್ ಪಾಕಿಸ್ತನದ ಪರ ಇದುವರೆಗು 70 ಏಕದಿನ ಮತ್ತು 112 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. ಭುಜದ ಗಾಯಕ್ಕೆ ಒಳಗಾಗುವ ಮೊದಲು ಅವರು ರಾಷ್ಟ್ರೀಯ ತಂಡದ ಪರ ಜೂನ್ ತಿಂಗಳಿನಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆಡಿದ್ದರು.

ಶಾದಾಬ್ ಖಾನ್ ರಾಷ್ಟ್ರೀಯ ತಂಡಕ್ಕೆ ವಾಪಾಸ್ಸಾತಿ ಮಾಡುತ್ತಿದ್ದಂತೆ ಸಲ್ಮಾನ್ ಅಲಿ ಆಘಾ ಅವರ ಬದಲು ಟಿ20 ತಂಡದ ನಾಯಕರನ್ನಾಗಿ ನೇಮಿಸುವ ಸಾಧ್ಯತೆ ಇದೆ. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವುದಕ್ಕೆ ಮೊದಲು ಟಿ20 ತಂಡದ ಉಪನಾಯಕರಾಗಿದ್ದರು.

27 ವರ್ಷದ ಅವರು ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಮಾತ್ರವಲ್ಲ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ಸದ್ಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಲ್ಮಾನ್ ಆಘಾ ಅವರ ಬೆಂಬಲಕ್ಕೆ ನಿಂತಿದ್ದರೂ, ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಸೋತ ಬಳಿಕ ಆಘಾ ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಎಂಬ ಅನುಮಾನಗಳು ಹೆಚ್ಚಾಗಿವೆ. ಪಾಕ್ ತಂಡಕ್ಕೆ ಧೀರ್ಘಾವಧಿಯ ನಾಯಕನನ್ನಾಗಿ ಶಾದಾಬ್ ಅವರನ್ನು ನೇಮಿಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.