ADVERTISEMENT

PAKvsSL | ಭಯೋತ್ಪಾದನೆ ದಾಳಿ; 10 ವರ್ಷದ ಬಳಿಕ ಪಾಕ್ ನೆಲದಲ್ಲಿ ಕ್ರಿಕೆಟ್ ಕಲರವ

ಬಿಗಿ ಭದ್ರತೆಯಲ್ಲಿ ಆರಂಭವಾದ ಪಂದ್ಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 5:58 IST
Last Updated 11 ಡಿಸೆಂಬರ್ 2019, 5:58 IST
   

ರಾವಲ್ಪಿಂಡಿ:ಸುದೀರ್ಘ ಹತ್ತು ವರ್ಷಗಳ ಬಳಿಕ ತಂಡ ಪಾಕಿಸ್ತಾನದಲ್ಲಿ ಟೆಸ್ಟ್‌ ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದು, ಐತಿಹಾಸಿಕ ಹಾಗೂ ಭಾವನಾತ್ಮಕ ಕ್ಷಣಕ್ಕೆ ಆತಿಥೇಯ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸಾಕ್ಷಿಯಾದವು.

ಇಲ್ಲಿನ ಕ್ರೀಡಾಂಗಣದಲ್ಲಿಬಿಗಿ ಭದ್ರತೆ ನಡುವೆ ಆರಂಭವಾದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ, ಬ್ಯಾಟಿಂಗ್‌ ಮುಂದುವರಿಸಿದೆ. ಸದ್ಯ 11 ಓವರ್‌ಗಳ ಆಟ ನಡೆದಿದ್ದು, ಯಾವುದೇ ವಿಕೆಟ್ ನಷ್ಟವಿಲ್ಲದೆ 30 ರನ್‌ ಗಳಿಸಿದೆ. ಆರಂಭಿಕ ದಿಮುತ್‌ ಕುಲರತ್ನೆ (28) ಹಾಗೂ ಒಶದಾ ಫರ್ನಾಂಡೊ (0) ಕ್ರೀಸ್‌ನಲ್ಲಿದ್ದಾರೆ.

2009ರಲ್ಲಿ ದ್ವೀಪರಾಷ್ಟ್ರ ತಂಡದ ಆಟಗಾರರಿದ್ದ ಬಸ್‌ ಮೇಲೆ ಇಸ್ಲಾಮಾಬಾದ್‌ನಲ್ಲಿ ಉಗ್ರರು ದಾಳಿ ನಡೆಸಿದ್ದರು. ಆ ಬಳಿಕ ಪಾಕ್‌ ಪ್ರವಾಸ ಕೈಗೊಳ್ಳಲು ಬೇರೆ ದೇಶದ ಆಟಗಾರರು ಹಿಂದೇಟು ಹಾಕಿದ್ದರು. ಹೀಗಾಗಿ ಇಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ಆಯೋಜನೆಯಾಗಿರಲಿಲ್ಲ. ಪಾಕಿಸ್ತಾನ ತಂಡವೂ ತಟಸ್ಥ ಸ್ಥಳಗಳಲ್ಲಿಯೇ ಪಂದ್ಯ ಆಡಬೇಕಾಗಿತ್ತು.

ADVERTISEMENT

ಇದೀಗಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಇಂದಿನಿಂದ ಆರಂಭವಾಗಿದ್ದು, ಎರಡನೇ ಪಂದ್ಯವು ಡಿ. 19–13ರವರೆಗೆಕರಾಚಿಯಲ್ಲಿ ನಡೆಯಲಿದೆ.

ಭಾವನಾತ್ಮಕ ಕ್ಷಣ ಎಂದ ಅಜರ್‌ ಅಲಿ
ದಶಕದ ನಂತರ ಪಾಕಿಸ್ತಾನಕ್ಕೆ ಹಿಂತಿರುಗುತ್ತಿರುವುದು ಭಾವನಾತ್ಮಕ ಕ್ಷಣ ಎಂದು ಪಾಕಿಸ್ತಾನ ತಂಡದ ನಾಯಕ ಅಜರ್‌ ಅಲಿ ಹೇಳಿದ್ದಾರೆ. ‘ನಮ್ಮ ನೆಲದಲ್ಲೇ ಆಡುವ ಈ ಕ್ಷಣ ಭಾವೋದ್ವೇಗದ್ದು. ಆದರೆ, ಆಸ್ಟ್ರೇಲಿಯಾ ವಿರುದ್ಧ ಇತ್ತೀಚಿನ ನಿರಾಶಾದಾಯಕ ಪ್ರವಾಸದ ನಂತರ ಸುಧಾರಣೆ ಮಾಡಿಕೊಳ್ಳುವ ನಮ್ಮ ಪ್ರಯತ್ನಕ್ಕೆ ಇದು ಅಡ್ಡಿಯಾಗದು’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.