
ಮೆಲ್ಬರ್ನ್: ದಿಗ್ಗಜ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಅವರು ಗಾಯದಿಂದ ಚೇತರಿಸದ ಕಾರಣ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಇದರಿಂದ ಪಂದ್ಯಾವಳಿ ಆರಂಭಕ್ಕೆ ಮೊದಲೇ ಆಸ್ಟ್ರೇಲಿಯಾ ಆಘಾತ ಅನಭವಿಸಿತು. ಆಯ್ಕೆಗಾರರು ಅವರ ಬದಲು ಇನ್ನೊಬ್ಬ ವೇಗಿ ಬೆನ್ ದ್ವಾರ್ಷಿಯರ್ಸ್ ಅವರನ್ನು 15 ಮಂದಿಯ ತಂಡಕ್ಕೆ ಆಯ್ಕೆ ಮಾಡಿದ್ದಾರೆ.
32 ವರ್ಷ ವಯಸ್ಸಿನ ಕಮಿನ್ಸ್ ಬೆನ್ನಿನ ಕೆಳಭಾಗದ ನೋವಿನಿಂದ ಪೂರ್ಣವಾಗಿ ಗುಣಮುಖರಾಗಿಲ್ಲ. ವಿಶ್ವಕಪ್ ಟೂರ್ನಿಯ ಫೆಬ್ರುವರಿ 7 ರಿಂದ ಮಾರ್ಚ್ 8ರವರೆಗೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಸಂಭವನೀಯ 15ರ ತಂಡದಲ್ಲಿದ್ದ ಮ್ಯಾಥ್ಯೂ ಶಾರ್ಟ್ ಅವರನ್ನೂ ಕೈಬಿಡಲಾಗಿದ್ದು, ಅವರ ಬದಲು ಮ್ಯಾಥ್ಯೂ ರೆನ್‌ಶಾ ಸೇರ್ಪಡೆಯಾಗಿದ್ದಾರೆ.
ರೆನ್‌ಶಾ ಇತ್ತೀಚಿನ ದಿನಗಳಲ್ಲಿ ನಿಯಮಿತ ಓವರುಗಳ ಕ್ರಿಕೆಟ್ ಟೂರ್ನಿಯಲ್ಲಿ ನೀಡುತ್ತಿರುವ ಉತ್ತಮ ಪ್ರದರ್ಶನ ಅವರಿಗೆ ಅವಕಾಶ ನೀಡಲು ಕಾರಣವಾಗಿದೆ ಎಂದು ಆಯ್ಕೆಗಾರ ಟೋನಿ ಡೋಡ್‌ಮೇಡ್ ತಿಳಿಸಿದರು.
ತಂಡ ಹೀಗಿದೆ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕಾನೊಲಿ, ಟಿಮ್ ಡೇವಿಸ್, ಬೆನ್ ದ್ವಾರ್ಷಿಯಸ್, ಕಾಮರಾನ್ ಗ್ರೀನ್, ನಥಾನ್ ಎಲಿಸ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುನ್ಹೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ರೆನ್‌ಶಾ, ಮಾರ್ಕಸ್ ಸ್ಟೊಯಿನಿಸ್ ಮತ್ತು ಆ್ಯಡಂ ಜಂಪಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.