ಡಬ್ಲಿನ್: ಅನುಭವಿ ಆರಂಭಿಕ ಆಟಗಾರ ಪಾಲ್ ಸ್ಟರ್ಲಿಂಗ್ ಅವರನ್ನು ಮುಂದಿನ ತಿಂಗಳು ನಡೆಯುವ ಟಿ20 ವಿಶ್ವಕಪ್‌ಗೆ ಐರ್ಲೆಂಡ್ ತಂಡದ ನಾಯಕರನ್ನಾಗಿ ಬುಧವಾರ ನೇಮಕ ಮಾಡಲಾಗಿದೆ.
ಸ್ಟರ್ಲಿಂಗ್ ಜತೆಗೆ ಆಂಡ್ರ್ಯೂ ಬಲ್ಬಿರ್ನಿ ಮತ್ತು ಜಾರ್ಜ್ ಡಾಕ್ರೆಲ್ ಅವರ ತಂಡದಲ್ಲಿ ಸ್ಥಾನ ಪಡೆದಿರುವ ಅನುಭವಿ ಆಟಗಾರರು. ಐರ್ಲೆಂಡ್ ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಎ ಗುಂಪಿನ ಪಂದ್ಯದಲ್ಲಿ ಭಾರತದ ವಿರುದ್ಧ ತನ್ನ ಅಭಿಯಾನ ಪ್ರಾರಂಭಿಸಲಿದೆ.
ಪಾಕಿಸ್ತಾನ, ಕೆನಡಾ ಮತ್ತು ಆತಿಥೇಯ ಅಮೆರಿಕ ಈ ಗುಂಪಿನಲ್ಲಿರುವ ಇತರ ಮೂರು ತಂಡಗಳು.
ಐರ್ಲೆಂಡ್ ತಂಡ: ಪಾಲ್ ಸ್ಟರ್ಲಿಂಗ್ (ನಾಯಕ), ಮಾರ್ಕ್ ಅಡೈರ್, ರಾಸ್ ಅಡೈರ್, ಆಂಡ್ರ್ಯೂ ಬಲ್ಬಿರ್ನಿ, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಗ್ರಹಾಂ ಹ್ಯೂಮ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ನೀಲ್ ರಾಕ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಲಾರ್ಕನ್ ಟಕರ್ (ವಿಕೆಟ್ ಕೀಪರ್), ಬೆನ್ ವೈಟ್ ಮತ್ತು ಕ್ರೇಗ್ ಯಂಗ್.
ಅಸ್ಸಾದ್ ವಾಲಾ: ಪಾಪುವಾ ನ್ಯೂಗಿನಿ ಸಹ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, 36 ವರ್ಷದ ಅನುಭವಿ ಆಟಗಾರ ಅಸ್ಸಾದ್ ವಾಲಾ ಅವರು ನಾಯಕನಾಗಿ ಹಾಗೂ ಆಲ್‌ರೌಂಡರ್ ಸಿಜೆ ಅಮಿನಿ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.