
ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಹೊಸ ಕೇಂದ್ರೀಯ ಗುತ್ತಿಗೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರಿಗೆ ‘ಕೆಟಗರಿ–ಬಿ’ಗ್ರೇಡ್‌ಗೆ ಹಿಂಬಡ್ತಿ ನೀಡಲಾಗಿದ್ದು, ಅವರು ಗುತ್ತಿಗೆ ಒಪ್ಪಂದಕ್ಕೆ ಸಹಿ ಮಾಡಲು ನಿರಾಕರಿಸಿದ್ದಾರೆ.
30 ಆಟಗಾರರ ಹೊಸ ಗುತ್ತಿಗೆ ಪಟ್ಟಿಯನ್ನು ಪಿಸಿಬಿ ಬಿಡುಗಡೆ ಮಾಡಿದ್ದು, ಇದರಲ್ಲಿ ರಿಜ್ವಾನ್ ಹೊರತುಪಡಿಸಿ ಉಳಿದವರೆಲ್ಲರೂ ಸಹಿ ಮಾಡಿದ್ದಾರೆ.
ಪಿಸಿಬಿಯ ಹಳೆಯ ಗುತ್ತಿಗೆಯಲ್ಲಿ ಬಾಬರ್, ರಿಜ್ವಾನ್ ಹಾಗೂ ಶಾಹಿನ್ ಷಾ ಅಫ್ರಿದಿ ಅವರು ‘ಕೆಟಗರಿ–ಎ’ ಗ್ರೇಡ್ ಹೊಂದಿದ್ದರು. ಇದೀಗ ಗುತ್ತಿಗೆಯಿಂದ ಕೆಟಗರಿ–ಎ ಅನ್ನು ತೆಗೆದುಹಾಕಲಾಗಿದೆ.
ಕಳೆದ ಒಂದು ವರ್ಷದಿಂದ ‘ಕೆಟಗರಿ–ಎ’ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಿರದ ಕಾರಣ ಅದನ್ನು ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಗುತ್ತಿಗೆಯಲ್ಲಿ ಕೆಟಗರಿ–ಬಿ ಅಲ್ಲಿ 10 ಆಟಗಾರರಿದ್ದು, ಕೆಟಗರಿ–ಎ ಅಲ್ಲಿದ್ದ ಮೂವರು ಸ್ಟಾರ್ ಆಟಗಾರರು ಕೂಡ ಇದೀಗ ಹಿಂಬಡ್ತಿ ಪಡೆದಿದ್ದಾರೆ. ಹಿರಿಯ ಆಟಗಾರರಿಗೆ ಕೆಟಗರಿ–ಎ ನೀಡುವಂತೆ ರಿಜ್ವಾನ್ ಅವರು ಪಿಸಿಬಿ ಅನ್ನು ಒತ್ತಾಯಿಸಿದ್ದರು.
2024ರ ಡಿಸೆಂಬರ್‌ನಿಂದ ಅಂತರರಾಷ್ಟ್ರೀಯ ಟಿ–20 ಕ್ರಿಕೆಟ್‌ಗೆ ಆಯ್ಕೆಯಾಗದೇ ಇರುವ ರಿಜ್ವಾನ್ ಅವರನ್ನು ಇತ್ತೀಚೆಗೆ ಏಕದಿನ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.