ADVERTISEMENT

ಏಷ್ಯಾಕಪ್‌ ಆತಿಥ್ಯ: ಹಿಂದೆಸರಿವ ಸುಳಿವು ನೀಡಿದ ಪಾಕಿಸ್ತಾನ

ಪಿಟಿಐ
Published 19 ಫೆಬ್ರುವರಿ 2020, 19:45 IST
Last Updated 19 ಫೆಬ್ರುವರಿ 2020, 19:45 IST
ಎಹ್ಸಾನ್‌ ಮಣಿ
ಎಹ್ಸಾನ್‌ ಮಣಿ    

ಕರಾಚಿ: ಈ ವರ್ಷ ನಿಗದಿಯಾಗಿರುವ ಏಷ್ಯಾ ಕಪ್‌ ಟಿ–20 ಆತಿಥ್ಯದಿಂದ ಪಾಕಿಸ್ತಾನ ಹಿಂದೆ ಸರಿಬಹುದು ಎಂಬ ಸುಳಿವನ್ನು ಆ ದೇಶದ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧ್ಯಕ್ಷ ಎಹ್ಸಾನ್‌ ಮಣಿ ಬುಧವಾರ ನೀಡಿದ್ದಾರೆ.

ಪಾಕಿಸ್ತಾನ್‌ ಸೂಪರ್‌ ಲೀಗ್‌ ಟ್ರೋಫಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಮಣಿ, ‘ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ನ (ಎಸಿಸಿ) ಇತರ ರಾಷ್ಟ್ರಗಳ ಜೊತೆ ಚರ್ಚೆಯ ನಂತರ ಏಷ್ಯಾ ಕಪ್‌ ನಡೆಯುವ ಸ್ಥಳದ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು’ ಎಂದು ತಿಳಿಸಿದರು.

ಎಸಿಸಿಯ ಸಭೆಮಾರ್ಚ್‌ ಮೊದಲ ವಾರ ನಡೆಯಲಿದ್ದು, ಅಲ್ಲಿ ಟೂರ್ನಿಯ ವಿವರಗಳನ್ನು ಅಂತಿಮಗೊಳಿಸಲಾಗುವುದು ಎಂದು ಮಣಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.