ADVERTISEMENT

ಪಿಸಿಬಿ: ವಿಶ್ವಾಸಾರ್ಹತೆಗಾಗಿ ‘ಪಂಚವಾರ್ಷಿಕ’ ಯೋಜನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 21:13 IST
Last Updated 15 ಜೂನ್ 2020, 21:13 IST
ಪಿಸಿಬಿ
ಪಿಸಿಬಿ   

ಲಾಹೋರ್ (ಪಿಟಿಐ): ವಿಶ್ವದ ಸಮರ್ಥ ಹಾಗೂ ವಿಶ್ವಾಸಾರ್ಹ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾಗುವ ಪ್ರಯತ್ನ ಆರಂಭಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇದಕ್ಕಾಗಿ ಐದು ವರ್ಷಗಳ ಯೋಜನೆಯನ್ನು ಪ್ರಕಟಿಸಿದೆ.

ಆಡಳಿತ ಮಂಡಳಿಯು ಈ ಯೋಜನೆಗೆ ಒಪ್ಪಿಗೆ ನೀಡಿದ್ದು ಬದ್ಧತೆ, ಪಾರದರ್ಶಕ ಆಡಳಿತ, ನೈತಿಕತೆ ಹಾಗೂ ವೃತ್ತಿಪರ ಶಿಸ್ತು ಎಂಬ ಮೂಲ ಅಂಶಗಳಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಪುರುಷರ, ಮಹಿಳೆಯರ ಮತ್ತು ವಯೋಮಾನ ವಿಭಾಗದವರ ತಂಡಗಳನ್ನು ಬಲಪಡಿಸುತ್ತಲೇ ಸಂಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವುದು ಪ್ರಮುಖ ಉದ್ದೇಶವಾಗಿದ್ದು ಯೋಜನೆ ಜಾರಿಯಲ್ಲಿರುವ ಐದೂ ವರ್ಷವೂ ಮಂಡಳಿಯ ಪ್ರಗತಿಯನ್ನು ಪ್ರತಿ ತಿಂಗಳು ಅವಲೋಕನ ಮಾಡಲಾಗುವುದು ಎನ್ನಲಾಗಿದೆ.

‘ಮಹಿಳಾ ಕ್ರಿಕೆಟ್‌ಗೆ ಸಂಬಂಧಿಸಿದ ಸೌಲಭ್ಯಗಳನ್ನು ವಿಸ್ತರಿಸುವುದು ಈ ಕಾರ್ಯಕ್ರಮದಲ್ಲಿ ಅಡಕವಾಗಿದೆ’ ಎಂದು ವಾಸಿಂ ಖಾನ್ ಅವರು ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.