ADVERTISEMENT

ಸರ್ದಾರ್‌ ಪಟೇಲ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 22:04 IST
Last Updated 24 ಫೆಬ್ರುವರಿ 2021, 22:04 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಅಹಮದಾಬಾದ್: ವಿಶ್ವದ ಅತಿದೊಡ್ಡ ಕ್ರಿಕೆಟ್‌ ತಾಣವೆಂಬ ಹೆಗ್ಗಳಿಕೆಯ ಸರ್ದಾರ್‌ ಪಟೇಲ್ ಕ್ರೀಡಾಂಗಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಕ್ರೀಡಾಂಗಣವೆಂದು ಮರುನಾಮಕರಣ ಮಾಡಲಾಯಿತು.

ನವೀಕೃತಗೊಂಡ ಈ ಕ್ರೀಡಾಂಗಣವನ್ನು ಬುಧವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಉದ್ಘಾಟಿಸಿ
ದರು. 63 ಎಕರೆ ವಿಸ್ತೀರ್ಣದಲ್ಲಿ ಈ ಕ್ರೀಡಾಂಗಣ ನಿರ್ಮಾಣವಾಗಿದೆ. 1.32 ಲಕ್ಷ ಆಸನಗಳ ಸಾಮರ್ಥ್ಯ ಇಲ್ಲಿದೆ.

‘ಇದು ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾಗಿತ್ತು. ಕ್ರೀಡಾಂಗಣವನ್ನು ಇನ್ನು ಅವರ ಹೆಸರಿನಿಂದಲೇ ಕರೆಯಲು ನಿರ್ಧರಿಸಲಾಗಿದೆ’ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ADVERTISEMENT

ಇದೇ ಸಂದರ್ಭದಲ್ಲಿ 232 ಎಕರೆ ಜಾಗದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾ ಸಮುಚ್ಚಯ ನಿರ್ಮಾ
ಣಕ್ಕೆ ಕೋವಿಂದ್ ಶಿಲಾನ್ಯಾಸ ಮಾಡಿದರು. ಬೇರೆ ಬೇರೆ ಕ್ರೀಡೆಗಳ ಆಯೋಜನೆ, ತರಬೇತಿ ಸೌಲಭ್ಯಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಉದ್ಘಾಟನೆ ಕಾರ್ಯಕ್ರಮದ ನಂತರ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯ ಇಲ್ಲಿ ಆರಂಭವಾಯಿತು. ಮಾರ್ಚ್‌ 4ರಿಂದ ನಡೆಯುವ ನಾಲ್ಕನೇ ಪಂದ್ಯಕ್ಕೂ ಈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.