ADVERTISEMENT

ಮಾಜಿ ಸಹ ಆಟಗಾರನ ಮೇಲೆ ಬ್ಯಾಟ್ ಬೀಸಿದ ಪೃಥ್ವಿ ಶಾ: ಮೈದಾನದಲ್ಲಿ ನಡೆದಿದ್ದೇನು?

ಪಿಟಿಐ
Published 8 ಅಕ್ಟೋಬರ್ 2025, 6:58 IST
Last Updated 8 ಅಕ್ಟೋಬರ್ 2025, 6:58 IST
<div class="paragraphs"><p>ಮುಂಬೈ ಆಟಗಾರರ ಜೊತೆ ಪೃಥ್ವಿ ಶಾ ಜಗಳ</p></div>

ಮುಂಬೈ ಆಟಗಾರರ ಜೊತೆ ಪೃಥ್ವಿ ಶಾ ಜಗಳ

   

ಚಿತ್ರ ಕೃಪೆ: @TimesB29989108

ಪುಣೆ: ಮುಂಬರುವ ರಣಜಿ ಟ್ರೋಫಿಗಾಗಿ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರ ತಂಡದ ಪರ ಆಡುತ್ತಿರುವ ಪೃಥ್ವಿ ಶಾ ತಮ್ಮ ಮಾಜಿ ಸಹ ಆಟಗಾರ ಮುಂಬೈನ ಮುಶೀರ್ ಖಾನ್ ವಿರುದ್ಧ ವಾಗ್ವಾದ ನಡೆಸಿ ಅವರ ಮೇಲೆ ಬ್ಯಾಟ್ ಬೀಸಿರುವ ಘಟನೆ ಮಂಗಳವಾರ ನಡೆದಿದೆ.

ADVERTISEMENT

ರಣಜಿ ಟ್ರೋಫಿ 2025-26ನೇ ಆವೃತ್ತಿ ಸದ್ಯದಲ್ಲೇ ಆರಂಭವಾಗಲಿದೆ. ಹೀಗಾಗಿ ಮುಂಬೈನ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ಮುಂಬೈ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ 3 ದಿನಗಳ ಅಭ್ಯಾಸ ಪಂದ್ಯ ಆಯೋಜಿಸಲಾಗಿದೆ.

ಈ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ಪರ ಆಡುತ್ತಿರುವ ಪೃಥ್ವಿ ಶಾ 181 ರನ್‌ ಬಾರಿಸಿ ಮುಶೀರ್ ಖಾನ್ ಬೌಲಿಂಗ್‌ನಲ್ಲಿ ಔಟ್ ಆಗುತ್ತಾರೆ.

ನಡೆದಿದ್ದೇನು?

ಕ್ರೀಸ್‌ನಿಂದ ತೆರಳುತ್ತಿದ್ದ ಪೃಥ್ವಿ ಶಾ ಅವರಿಗೆ ಮುಶೀರ್ ಖಾನ್ ಟಾಟಾ ಎಂದು ಸನ್ನೆ ಮಾಡಿ ವಿದಾಯ ಹೇಳಿ ಸಂಭ್ರಮಾಚರಣೆ ಮಾಡಿದರು. ಇದು ಪೃಥ್ವಿ ಶಾ ಅವರನ್ನು ಕೋಪಗೊಳ್ಳುವಂತೆ ಮಾಡುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಔಟ್ ಆಗಿ ಪೆವಿಲಿಯನ್‌ನತ್ತ ಹೋಗುವಾಗ ಶಾ ಹಲವು ಆಟಗಾರರೊಂದಿಗೆ ವಾಗ್ವಾದ ನಡೆಸುತ್ತಿರುವುದು ಹಾಗೂ ಮುಶೀರ್ ಖಾನ್ ಕಡೆಗೆ ಬ್ಯಾಟ್ ಎತ್ತಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಬಳಿಕ ಮಧ್ಯೆ ಪ್ರವೇಶಿಸಿದ ಅಂಪೈರ್‌ಗಳು ಉಭಯ ಆಟಗಾರರನ್ನು ಸಮಾಧಾನಪಡಿಸಲು ಮುಂದಾಗುತ್ತಾರೆ. ಇದಾದ ಬಳಿಕವೂ ಮುಂಬೈನ ಆಟಗಾರ ಸಿದ್ಧೇಶ್ ಲಾಡ್ ಪೃಥ್ವಿ ಶಾ ಪೆವಿಲಿಯನ್‌ಗೆ ಹಿಂತಿರುಗುವಾಗ ಅವರನ್ನು ಹಿಂಬಾಲಿಸಿ ಹೋಗುವುದನ್ನು ಕಾಣಬಹುದು.

ಪೃಥ್ವಿ ಶಾ ಮೂರು ದಿನಗಳ ಅಭ್ಯಾಸ ಪಂದ್ಯದ ಮೊದಲನೇ ದಿನ 220 ಎಸೆತಗಳನ್ನು ಎದುರಿಸಿದ 21 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 181 ರನ್ ಬಾರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.