ADVERTISEMENT

ಪೃಥ್ವಿ ಶಾ ಭಾರತ ‘ಎ’ ತಂಡಕ್ಕೆ

ಪಿಟಿಐ
Published 15 ಜನವರಿ 2020, 19:52 IST
Last Updated 15 ಜನವರಿ 2020, 19:52 IST
ಪೃಥ್ವಿ ಶಾ
ಪೃಥ್ವಿ ಶಾ   

ನವದೆಹಲಿ : ಗಾಯದಿಂದ ಗುಣಮುಖರಾಗಿರುವ ಯುವ ಬ್ಯಾಟ್ಸ್‌ ಮನ್ ಪೃಥ್ವಿ ಶಾ ನ್ಯೂಜಿಲೆಂಡ್ ‘ಎ’ ತಂಡದ ಎದುರಿನ ಕ್ರಿಕೆಟ್‌ ಸರಣಿಗೆ ಭಾರತ ‘ಎ’ ತಂಡವನ್ನು ಸೇರಲಿದ್ದಾರೆ. ಕಳೆದ ವಾರ ನಡೆದ ರಣಜಿ ಟ್ರೋಫಿ ಪಂದ್ಯದ ವೇಳೆ ಅವರು ಗಾಯ ಗೊಂಡಿದ್ದರು.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ಅವರು ಫಿಟ್ ಆಗಿರುವುದನ್ನು ಬುಧವಾರ ಎನ್‌ಸಿಎ ದೃಢಪಡಿಸಿದ್ದು ಗುರುವಾರ ಸಂಜೆ ಅಥವಾ ಶುಕ್ರವಾರ ಬೆಳಿಗ್ಗೆ ’ಎ’ ತಂಡವನ್ನು ಸೇರಿಕೊಳ್ಳಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.