ADVERTISEMENT

ಕೇಂದ್ರೀಯ ಗುತ್ತಿಗೆ: ಪೂಜಾರ, ರಹಾನೆ, ಪಾಂಡ್ಯಗೆ ಹಿಂಬಡ್ತಿ

ಪಿಟಿಐ
Published 2 ಮಾರ್ಚ್ 2022, 20:11 IST
Last Updated 2 ಮಾರ್ಚ್ 2022, 20:11 IST
ಅಜಿಂಕ್ಯ ರಹಾನೆ (ಎಡ) ಮತ್ತು ಚೇತೇಶ್ವರ್ ಪೂಜಾರ –ಎಎಫ್‌ಪಿ ಚಿತ್ರ
ಅಜಿಂಕ್ಯ ರಹಾನೆ (ಎಡ) ಮತ್ತು ಚೇತೇಶ್ವರ್ ಪೂಜಾರ –ಎಎಫ್‌ಪಿ ಚಿತ್ರ   

ಮೊಹಾಲಿ: ಫಾರ್ಮ್ ಕಳೆದುಕೊಂಡಿರುವ ಅನುಭವಿ ಬ್ಯಾಟರ್ ಚೇತೇಶ್ವರ್ ಪೂಜಾರ ಮತ್ತು ಟೆಸ್ಟ್ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕೇಂದ್ರೀಯ ಗುತ್ತಿಗೆ ಪದ್ಧತಿಯಲ್ಲಿ ಹಿಂಬಡ್ತಿಗೆ ಒಳಗಾಗಿದ್ದಾರೆ.

ಮಂಡಳಿಯ ಅಪೆಕ್ಸ್ ಸಮಿತಿ ಬುಧವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪೂಜಾರ, ರಹಾನೆ ಮತ್ತು ವೇಗದ ಬೌಲರ್ ಇಶಾಂತ್ ಶರ್ಮಾ ಅವರನ್ನು ‘ಎ’ ದರ್ಜೆಯಿಂದ ‘ಬಿ’ ದರ್ಜೆಗೆ ಇಳಿಸಲಾಗಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಎಡಗೈ ಬ್ಯಾಟರ್ ಶಿಖರ್ ಧವನ್ ಅವರನ್ನು ‘ಎ’ ದರ್ಜೆಯಿಂದ ’ಸಿ‘ ದರ್ಜೆಗೆ ಇಳಿಸಲಾಗಿದೆ. ಈ ವರೆಗೆ 10 ಮಂದಿ ಇದ್ದ ’ಎ’ ಈಗ ಐದು ಮಂದಿಗೆ ಇಳಿಕೆಯಾಗಿದೆ.

ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜ, ರಿಷಭ್ ಪಂತ್‌, ಕೆ.ಎಲ್‌.ರಾಹುಲ್ ಮತ್ತು ಮೊಹಮ್ಮದ್ ಶಮಿ ’ಎ‘ ದರ್ಜೆಯಲ್ಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್ ಬೂಮ್ರಾ ‘ಎ+‘ ದರ್ಜೆಯಲ್ಲಿದ್ದಾರೆ.

ADVERTISEMENT

ಈಚೆಗೆ ವಿವಾದಕ್ಕೆ ಕಾರಣರಾಗಿದ್ದ ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಹಾ ಅವರು ‘ಬಿ’ ಗುಂಪಿಂದ ’ಸಿ’ ಗುಂಪಿಗೆ ಹಿಂಬಡ್ತಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.