ADVERTISEMENT

IPL 2024: ಪಂಜಾಬ್ ಕಿಂಗ್ಸ್‌ಗೆ 183 ರನ್‌ಗಳ ಗೆಲುವಿನ ಗುರಿ ನೀಡಿದ ಹೈದರಾಬಾದ್

ಪಿಟಿಐ
Published 9 ಏಪ್ರಿಲ್ 2024, 14:04 IST
Last Updated 9 ಏಪ್ರಿಲ್ 2024, 14:04 IST
<div class="paragraphs"><p>ಕಮಿನ್ಸ್‌, ಶಿಖರ್</p></div>

ಕಮಿನ್ಸ್‌, ಶಿಖರ್

   

ಮುಲ್ಲನಪುರ (ಪಂಜಾಬ್‌): ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್‌ಗೆ 183 ರನ್‌ಗಳ ಗೆಲುವಿನ ಗುರಿ ನೀಡಿದೆ.

ಟಾಸ್‌ ಗೆದ್ದಿರುವ ಪಂಜಾಬ್ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಸನ್‌ರೈಸರ್ಸ್‌ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್‌ ಮಾಡಿತು.

ADVERTISEMENT

20 ಓವರ್‌ಗಳಲ್ಲಿ ಹೈದರಾಬಾದ್‌ ತಂಡ 9 ವಿಕೆಟ್‌ ಕಳೆದುಕೊಂಡು 182 ರನ್‌ ಪೇರಿಸಿತು. ಈ ಪಂದ್ಯವನ್ನು ಗೆಲ್ಲಬೇಕಾದರೆ ಪಂಜಾಬ್‌ 183 ರನ್‌ ಹೊಡೆಯಬೇಕಿದೆ.

ಹೈದರಾಬಾದ್‌ ಪರ ನಿತೀಶ್‌ ರೆಡ್ಡಿ 64 ರನ್‌ಗಳಿಸಿ ಗಮನ ಸೆಳೆದರು. ಪಂಜಾಬ್ ಪರ ಅರ್ಷದೀಪ್‌ 4 ವಿಕೆಟ್‌ ಪಡೆದರು.

ಎರಡೂ ತಂಡಗಳು ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು, ಎರಡು ಸೋಲುಗಳನ್ನು ಕಂಡಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.