ಆರ್. ಅಶ್ವಿನ್
ನವದೆಹಲಿ: ಈಚೆಗಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಆರ್. ಅಶ್ವಿನ್ ಅವರು ವಿದೇಶಿ ಟಿ20 ಲೀಗ್‌ನಲ್ಲಿ ಆಡಲು ಆಸಕ್ತಿ ತೋರಿದ್ದಾರೆ.
ಯುಎಇನಲ್ಲಿ ನಡೆಯುವ ಇಂಟರ್‌ನ್ಯಾಷನಲ್ ಲೀಗ್ ಟಿ20 (ಐಎಲ್ ಟಿ20) ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಹರಾಜು ಪ್ರಕ್ರಿಯೆ ಸೆಪ್ಟೆಂಬರ್ 30ರಂದು ದುಬೈನಲ್ಲಿ ನಡೆಯಲಿದೆ.
‘ಐಎಲ್ ಟಿ20 ಟೂರ್ನಿಯ ಆಯೋಜಕರೊಂದಿಗೆ ಸಂಪರ್ಕದಲ್ಲಿದ್ದೇನೆ. ಹರಾಜಿಗೆ ನೋಂದಾಯಿಸಿಕೊಂಡರೆ, ಯಾವುದಾದರೂ ಫ್ರ್ಯಾಂಚೈಸಿ ನನ್ನನ್ನು ಖರೀದಿಸುವ ವಿಶ್ವಾಸವಿದೆ’ ಎಂದು ಅಶ್ವಿನ್ ಅವರು ಕ್ರಿಕ್‌ಬಜ್ ಜೊತೆಗಿನ ಮಾತುಕತೆ ವೇಳೆ ಹೇಳಿರುವುದಾಗಿ ವರದಿಯಾಗಿದೆ.
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ 2024ರ ಡಿಸೆಂಬರ್‌ನಲ್ಲಿ ವಿದಾಯ ಹೇಳಿದ್ದ ಅಶ್ವಿನ್ ಅವರು ಐಪಿಎಲ್‌ನಿಂದಲೂ ಹೊರಗುಳಿಯುವುದಾಗಿ ಆಗಸ್ಟ್ 27ರಂದು ಪ್ರಕಟಿಸಿದ್ದರು. ಹೀಗಾಗಿ, ಅವರು ಜಗತ್ತಿನಾದ್ಯಂತ ನಡೆಯಲಿರುವ ಯಾವುದೇ ಟಿ20 ಲೀಗ್‌ಗಳಲ್ಲಿ ಆಡಬಹುದಾಗಿದೆ.
ಅಂಬಟಿ ರಾಯುಡು ಅವರು ಕೂಡ ಕಳೆದ ಬಾರಿ ಐಎಲ್ ಟಿ20 ಲೀಗ್‌ನಲ್ಲಿ ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.