ಎರಡು ವಿಕೆಟ್ ಪಡೆದ ಕೆಎಸ್‌ಸಿಎ ಕೋಲ್ಸ್ಟ್‌ನ ಧನುಷ್ ಗೌಡ ಅವರ ಬೌಲಿಂಗ್ ವೈಖರಿ
– ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರು: ಮಳೆ ಸುರಿದ ಕಾರಣ ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಕೆಎಸ್‌ಸಿಎ ಕೋಲ್ಸ್ಟ್ ಹಾಗೂ ಒಡಿಶಾ ಕ್ರಿಕೆಟ್ ಸಂಸ್ಥೆ ತಂಡದ ನಡುವಣ ಪಂದ್ಯ ಡ್ರಾ ಆಯಿತು.
ಇಲ್ಲಿನ ಎಸ್‌ಜೆಸಿಇ ಮೈದಾನದಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಕೋಲ್ಟ್ಸ್‌ನ ಕೆ.ಪಿ.ಕಾರ್ತಿಕೇಯ 5ನೇ ವಿಕೆಟ್ ಪಡೆಯುವ ಮೂಲಕ 349 ರನ್‌ಗಳಿಗೆ ಒಡಿಶಾ ತಂಡವನ್ನು ಕಟ್ಟಿಹಾಕಿದರು.
235 ರನ್‌ಗಳ ಇನ್ನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಒಡಿಶಾ ತಂಡಕ್ಕೆ ಧನುಷ್ ಗೌಡ 2 ವಿಕೆಟ್ ಉರುಳಿಸಿ ಆರಂಭಿಕ ಆಘಾತ ನೀಡಿದರು. 11 ಓವರ್‌ಗಳಲ್ಲಿ 44 ರನ್ ಮಾತ್ರ ಗಳಿಸಿತು. ಮಳೆ ಬಂದ ಕಾರಣ ಆಟ ನಿಂತಿತು. ಅದರಿಂದ ಪಂದ್ಯ ಡ್ರಾ ಆಯಿತು.
ಸಂಕ್ಷಿಪ್ತ ಸ್ಕೋರ್
ಎಸ್‌ಜೆಸಿಇ ಕ್ರೀಡಾಂಗಣ: ಮೊದಲ ಇನಿಂಗ್ಸ್: ಕೆಎಸ್‌ಸಿಎ ಕೋಲ್ಟ್ಸ್: 162.3 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 584 ಡಿಕ್ಲೇರ್. ಒಡಿಶಾ: 97 ಓವರ್‌ಗಳಲ್ಲಿ 349 (ವಿಪ್ಲವ್ ಸಾಮಂತ್ರೆ 101, ಕಾರ್ತಿಕ್ ಬಿಸ್ವಾಲ್ 85. ಕೆ.ಪಿ.ಕಾರ್ತಿಕೇಯ 57ಕ್ಕೆ 5, ಧನುಷ್ ಗೌಡ 40ಕ್ಕೆ 2).
ಎರಡನೇ ಇನಿಂಗ್ಸ್: ಒಡಿಶಾ 11 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 44. (ಅನುರಾಗ್ ಸಾರಂಗಿ ಔಟಾಗದೆ 25. ಧನುಷ್‌ಗೌಡ 17ಕ್ಕೆ 2)
ಫಲಿತಾಂಶ: ಡ್ರಾ.
ಇಂದಿನ ಪಂದ್ಯ
ಕೆಎಸ್‌ಸಿಎ ಕೋಲ್ಸ್ಟ್ ವಿರುದ್ಧ ಡಾ.ಡಿ.ವೈ.ಪಾಟೀಲ ಕ್ರಿಕೆಟ್ ಅಕಾಡೆಮಿ. (ಸ್ಥಳ: ಎಸ್‌ಜೆಸಿಇ ಮೈದಾನ)
ಬರೋಡಾ ಕ್ರಿಕೆಟ್ ಸಂಸ್ಥೆ ವಿರುದ್ಧ ಒಡಿಶಾ ಕ್ರಿಕೆಟ್ ಸಂಸ್ಥೆ. (ಸ್ಥಳ: ಎಸ್‌ಡಿಎನ್‌ಆರ್‌ಡಬ್ಲ್ಯು ಮೈದಾನ, ಮಾನಸಗಂಗೋತ್ರಿ. ಬೆಳಿಗ್ಗೆ 9.30.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.