ADVERTISEMENT

ದೆಹಲಿ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಜತ್‌ ಶರ್ಮಾ ರಾಜೀನಾಮೆ

ಡಿಡಿಸಿಎ

ಏಜೆನ್ಸೀಸ್
Published 16 ನವೆಂಬರ್ 2019, 7:37 IST
Last Updated 16 ನವೆಂಬರ್ 2019, 7:37 IST
ರಜತ್ ಶರ್ಮಾ
ರಜತ್ ಶರ್ಮಾ   

ನವದೆಹಲಿ:‌ಹಿರಿಯ ಪತ್ರಕರ್ತ ರಜತ್‌ ಶರ್ಮಾದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಅಧ್ಯಕ್ಷ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.

ಸಂಸ್ಥೆಯೊಳಗಿನ ಒತ್ತಡ ಮತ್ತು ಜಿದ್ದಾಜಿದ್ದಿಯ ಕಾರಣಗಳಿಂದಾಗಿ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ರಜತ್‌ ಶರ್ಮಾ ತಕ್ಷಣದಿಂದ ಅನ್ವಯವಾಗುವಂತೆ ರಾಜೀನಾಮೆ ಸಲ್ಲಿಸಿದ್ದಾರೆ. ಶರ್ಮಾ ಅವರ 20 ತಿಂಗಳ ಅಧಿಕಾರ ಅವಧಿಯಲ್ಲಿ ಪ್ರಧಾನ ಕಾರ್ಯದರ್ಶಿ ವಿನೋದ್ ತಿಹಾರಾ ಅವರೊಂದಿಗೆ ಗೊಂದಲಮಯ ತಿಕ್ಕಾಟ ನಡೆದಿತ್ತು.

'ಇಲ್ಲಿನ ಕ್ರಿಕೆಟ್‌ ಆಡಳಿತವು ಸದಾ ಹಗ್ಗಜಗ್ಗಾಟದಲ್ಲಿ ಸಿಲುಕಿರುತ್ತದೆ. ಕ್ರಿಕೆಟ್‌ಗಿಂತಲೂ ಇಲ್ಲಿ ಸ್ವಹಿತಾಸಕ್ತಿಯೇ ಹೆಚ್ಚು ಕಾರ್ಯೋನ್ಮುಖವಾಗಿವಂತೆ ನನ್ನ ಅನುಭವಕ್ಕೆ ಬಂದಿದೆ' ಎಂದು ಶರ್ಮಾ ಹೇಳಿದ್ದಾರೆ.

ADVERTISEMENT

'ನನ್ನ ಪ್ರಮಾಣಿಕತೆ ಮತ್ತು ಪಾರದರ್ಶಕತೆ ಸಿದ್ಧಾಂತಗಳೊಟ್ಟಿಗೆ ಡಿಡಿಸಿಎನಲ್ಲಿ ನಾನು ಮುಂದುವರಿಯಲುಬಹುಶಃ ಸಾಧ್ಯವಾಗುವುದಿಲ್ಲ. ಪ್ರಮಾಣಿಕತೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದು ಸಾಧ್ಯವೇ ಇಲ್ಲ' ಎಂದಿದ್ದಾರೆ.

ಮಾಜಿ ಹಣಕಾಸು ಸಚಿವ ದಿವಂಗತ ಅರುಣ್‌ ಜೇಟ್ಲಿ ಅವರ ಬೆಂಬಲದೊಂದಿಗೆ ಶರ್ಮಾ ಕ್ರಿಕೆಟ್‌ ಮಂಡಳಿಗೆ ಸೇರ್ಪಡೆಯಾಗಿದ್ದರು. ಆದರೆ, ಜೇಟ್ಲಿ ಅವರ ನಿಧನದ ಬಳಿಕ ಡಿಡಿಸಿಎನಲ್ಲಿ ಶರ್ಮಾ ಅವರು ನೆಲೆ ಕಳೆದುಕೊಂಡರು ಎಂದು ಕ್ರಿಕೆಟ್‌ ಮಂಡಳಿಯ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.