ADVERTISEMENT

ಇಂಗ್ಲೆಂಡ್ ವಿರುದ್ಧ ವೈಟ್‌ವಾಶ್‌: ಪಾಕ್‌ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ರಮೀಝ್ ವಜಾ

ರಮೀಝ್‌ ರಾಜಾ ಅವರನ್ನು ಕಿತ್ತು ಹಾಕಿದ ಪಾಕ್‌ ‍ಪ್ರಧಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2022, 7:20 IST
Last Updated 22 ಡಿಸೆಂಬರ್ 2022, 7:20 IST
ರಮೀಝ್‌ ರಾಜಾ
ರಮೀಝ್‌ ರಾಜಾ   

ಇಸ್ಲಾಮಾಬಾದ್: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಪಾಕಿಸ್ತಾನ ತಂಡವು 3–0 ಅಂತರದಿಂದ ಹೀನಾಯವಾಗಿ ಸೋತು, ವೈಟ್‌ವಾಶ್‌ ಅನುಭವಿಸಿದ ಬೆನ್ನಲ್ಲೇ ಇದೀಗ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷರ ತಲೆದಂಡವಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ಮಾಜಿ ಕ್ರಿಕೆಟಿಗ ರಮೀಝ್‌ ರಾಜಾ ಅವರನ್ನು ಪಾಕಿಸ್ತಾನ ಸರ್ಕಾರ ಕಿತ್ತು ಹಾಕಿದೆ.

ಜತೆಗೆ ಮುಂದಿನ ನಾಲ್ಕು ತಿಂಗಳ ಕಾಲ ಸಮಿತಿಯ ಆಗುಹೋಗುಗಳನ್ನು ನಿರ್ವಹಿಸಲು ನಜಮ್‌ ಸೇಥಿ ನೇತೃತ್ವದ 14 ಮಂದಿಯ ಸಮಿತಿಯನ್ನು ರಚನೆ ಮಾಡಿದೆ.

ADVERTISEMENT

ರಮೀಝ್‌ ರಾಜಾ ಅವರನ್ನು ಪಿಸಿಬಿ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್‌ಚರಿಚಕ ಅಧಿಸೂಚನೆ ಹೊರಡಿಸಿದ್ದು, ಇದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಬೇಕಷ್ಟೆ. ಅನುಮೋದನೆ ನೀಡುವುದು ಕೇವಲ ಔಪಚಾರಿಕ ಪ್ರಕ್ರಿಯೆಯಷ್ಟೇ.

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಂದ 2021ರ ಸೆಪ್ಟೆಂಬರ್‌ನಲ್ಲಿ ಪಿಸಿಬಿ ಅಧ್ಯಕ್ಷರಾಗಿ, ರಮೀಝ್ ನೇಮಕವಾಗಿದ್ದರು. ಇದೀಗ ಅವರ 15 ತಿಂಗಳ ಅಧಿಕಾರ ಮುಕ್ತಾಯವಾಗಿದೆ.

ಇನ್ನು ಅಧ್ಯಕ್ಷರನ್ನು ವಜಾ ಮಾಡಿರುವ ಬಗ್ಗೆ ಪಿಸಿಬಿಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.