ADVERTISEMENT

Ranji Trophy | ಕರ್ನಾಟಕಕ್ಕೆ ಉತ್ತಮ ಆರಂಭ ನೀಡಿದ ಮಯಂಕ್, ಸಮರ್ಥ್

ಗಿರೀಶದೊಡ್ಡಮನಿ
Published 6 ಜೂನ್ 2022, 7:05 IST
Last Updated 6 ಜೂನ್ 2022, 7:05 IST
ಮಯಂಕ್ ಅಗರವಾಲ್ (ಸಂಗ್ರಹ ಚಿತ್ರ)
ಮಯಂಕ್ ಅಗರವಾಲ್ (ಸಂಗ್ರಹ ಚಿತ್ರ)   

ಬೆಂಗಳೂರು: ಮಯಂಕ್ ಅಗರವಾಲ್ ಮತ್ತು ಆರ್. ಸಮರ್ಥ್ ಅವರು ಸೋಮವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ನೀಡಿದರು.

ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣವು ತೇವಗೊಂಡಿದ್ದರಿಂದ ಸೋಮವಾರ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದ್ದ ಪಂದ್ಯವು 11.20ಕ್ಕೆ ಶುರುವಾಯಿತು. ಟಾಸ್ ಗೆದ್ದ ಉತ್ತರಪ್ರದೇಶ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡವು ಊಟದ ವಿರಾಮದ ವೇಳೆಗೆ 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 32 ರನ್ ಗಳಿಸಿತು. ಮಯಂಕ್ ಅಗರವಾಲ್ 8 ರನ್ ಮತ್ತು ಸಮರ್ಥ್ 24 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಸಮರ್ಥ್ ಅತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪ್ರಖರ ಬಿಸಿಲಿನಲ್ಲಿ ಕೆಂಪು ಚೆಂಡಿನ ಹೊಳಪು ಮತ್ತು ಸ್ವಿಂಗ್‌ಗಳಿಗೆ ತಕ್ಕ ಉತ್ತರ ನೀಡಿದರು. ಐದು ಬೌಂಡರಿ ಗಳಿಸಿದ ಅವರು ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಿದರು.

ಉತ್ತರ ಪ್ರದೇಶ ಬೌಲಿಂಗ್ ಪಡೆ ಯಶ್ ದಯಾಳ್, ಅಂಕಿತ್ ರಜಪೂತ್, ಶಿವಂಮಾವಿ ಮತ್ತುಸೌರಭ್ ಅವರ ಪ್ರಯತ್ನಗಳಿಗೆ ಫಲ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.