ADVERTISEMENT

ಶಿವಮೊಗ್ಗ: ರಣಜಿ ಟ್ರೋಫಿ ಕ್ರಿಕೆಟ್‌– ಕರ್ನಾಟಕ-ಗೋವಾ ಪಂದ್ಯ ಒಂದೂವರೆ ಗಂಟೆ ತಡ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:45 IST
Last Updated 25 ಅಕ್ಟೋಬರ್ 2025, 5:45 IST
   

ಶಿವಮೊಗ್ಗ: ಇಲ್ಲಿನ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಕರ್ನಾಟಕ ಮತ್ತು ಗೋವಾ ನಡುವಣ ರಣಜಿ ಟ್ರೋಫಿ ಎಲೀಟ್‌ 'ಬಿ' ಗುಂಪಿನ‌ ಪಂದ್ಯ ಒಂದೂವರೆ ಗಂಟೆ ತಡವಾಗಿ ಆರಂಭವಾಯಿತು.

ಪಂದ್ಯವು ನಿಗದಿಯಂತೆ ಬೆಳಿಗ್ಗೆ 9.30ಕ್ಕೆ ಶುರುವಾಗಬೇಕಿತ್ತು. ಶನಿವಾರ ಮುಂಜಾನೆ ಕೊಂಚ ಮಳೆ ಬಿದ್ದ ಕಾರಣ 'ಔಟ್‌ಫೀಲ್ಡ್‌' ಒದ್ದೆಯಾಗಿತ್ತು. ಪಿಚ್‌ ಕೂಡ ತೇವಾಂಶದಿಂದ ಕೂಡಿತ್ತು. ಹೀಗಾಗಿ ಬೆಳಿಗ್ಗೆ 10 ಗಂಟೆಗೆ ಅಂಪೈರ್‌ಗಳು ಮೊದಲ ಬಾರಿಗೆ ಪಿಚ್‌ನ ಪರಿಶೀಲನೆ ನಡೆಸಿದರು. 10.20ಕ್ಕೆ ಎರಡನೇ ಬಾರಿ ಪರಿಶೀಲಿಸಿ, ಆಟಕ್ಕೆ ಯೋಗ್ಯವಾಗಿರುವುದು ಖಚಿತವಾದ್ದರಿಂದ ಸರಿಯಾಗಿ 10.27ಕ್ಕೆ ಟಾಸ್‌ ನಡೆಸಲಾಯಿತು. 11ಗಂಟೆಗೆ ಪಂದ್ಯ ಆರಂಭವಾಯಿತು.

ಟಾಸ್‌ ಗೆದ್ದ ಗೋವಾ ತಂಡ ಬೌಲಿಂಗ್‌ ಆಯ್ಕೆಮಾಡಿಕೊಂಡಿದೆ. ಈ ತಂಡದ ಪರ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಮೊದಲ ಓವರ್‌ ಬೌಲ್‌ ಮಾಡಿದರು.

ADVERTISEMENT

ಕರ್ನಾಟಕ ತಂಡದ ನಾಯಕ ಮಯಂಕ್‌ ಅಗರವಾಲ್ ಮತ್ತು ನಿಕಿನ್‌ ಜೋಸ್‌ ಇನಿಂಗ್ಸ್‌ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.