
ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಪಾವೊರಿಮ್ (ಗೋವಾ): ರಣಜಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವು ಸಾರಾಂಶ್ ಜೈನ್ ಅವರ ಅಜೇಯ 82 ರನ್‌ಗಳ ನೆರವಿನಿಂದ ಮಂಗಳವಾರ ಗೋವಾ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿತು.
ಮೊದಲ ಇನಿಂಗ್ಸ್‌ನಲ್ಲಿ 97 ರನ್‌ಗಳ ಮುನ್ನಡೆ ಪಡೆದಿದ್ದ ಗೋವಾಕ್ಕೆ ಇದು ಋತುವಿನ ಮೊದಲ ಸೋಲು.
ಸ್ಕೋರುಗಳು: ಗೋವಾ: 284 ಮತ್ತು 230; ಮಧ್ಯಪ್ರದೇಶ: 187 ಮತ್ತು 94 ಓವರುಗಳಲ್ಲಿ 7 ವಿಕೆಟ್‌ಗೆ 328
ಜಮ್ಮು–ಕಾಶ್ಮೀರಕ್ಕೆ ಚಾರಿತ್ರಿಕ ಜಯ
ನವದೆಹಲಿ: ಸ್ಫೂರ್ತಿಯುತ ಆಟವಾಡಿದ ಜಮ್ಮು ಮತ್ತು ಕಾಶ್ಮೀರ ತಂಡ 65 ವರ್ಷಗಳಲ್ಲಿ ಇದೇ ಮೊದಲ ಬಾರಿ ದೆಹಲಿ ತಂಡದ ವಿರುದ್ಧ ಏಳು ವಿಕೆಟ್‌ಗಳಿಂದ ಚಾರಿತ್ರಿಕ ಗೆಲುವು ಸಾಧಿಸಿತು. ಆರಂಭ ಆಟಗಾರ ಕಮ್ರಾನ್ ಇಕ್ಬಾಲ್ ಅಜೇಯ 133 ರನ್ ಗಳಿಸಿ ಗೆಲುವಿನಲ್ಲಿ ಮಿಂಚಿದರು.
ಇದರೊಂದಿಗೆ ಒಂದು ಕಾಲದ ಪ್ರಬಲ ತಂಡ ದೆಹಲಿ ಮುಖಭಂಗ ಅನುಭವಿಸಿತು. 1960ರ ನಂತರ ಜಮ್ಮು– ಕಾಶ್ಮೀರ ವಿರುದ್ಧ 43 ಪಂದ್ಯಗಳಲ್ಲಿ 37ರಲ್ಲಿ ದೆಹಲಿ ಜಯಗಳಿಸಿತ್ತು. ಉಳಿದವು ಡ್ರಾ ಆಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.