
ಹೈದರಾಬಾದ್: ಮುಂಬೈ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ ಹೈದರಾಬಾದ್ ಎದುರು 9 ವಿಕೆಟ್‌ಗಳಿಂದ ಜಯಿಸಿ ನಾಕೌಟ್ ಪ್ರವೇಶಿಸಿತು.
ಭಾನುವಾರ ನಾಲ್ಕನೇ ಮತ್ತು ಕೊನೆಯ ದಿನದಾಟದಲ್ಲಿ ಹೈದರಾಬಾದ್ ತಂಡವು 69.5 ಓವರ್‌ಗಳಲ್ಲಿ 302 ರನ್ ಗಳಿಸಿ (ಶನಿವಾರದ ಆಟದ ಅಂತ್ಯಕ್ಕೆ 7ಕ್ಕೆ166) ಎಲ್ಲ ವಿಕೆಟ್ ಕಳೆದುಕೊಂಡಿತು. ಮುಂಬೈನ ಮುಷೀರ್ ಖಾನ್ ಅವರು 5 ವಿಕೆಟ್ ಗೊಂಚಲು ಗಳಿಸಿದರು.
ಮುಂಬೈ ತಂಡವು ಮೊದಲ ಇನಿಂಗ್ಸ್‌ನಲ್ಲಿ 560 ರನ್ ಗಳಿಸಿತ್ತು. ಹೈದರಾಬಾದ್ ತಂಡವು ಅದಕ್ಕುತ್ತರವಾಗಿ 267 ರನ್ ಗಳಿಸಿತ್ತು. ಮುಂಬೈ ತಂಡವು ಹೈದರಾಬಾದ್ ಮೇಲೆ ಫಾಲೋ ಆನ್ ಹೇರಿತ್ತು. ಎರಡನೇ ಇನಿಂಗ್ಸ್‌ನಲ್ಲಿ 10 ರನ್‌ಗಳ ಮುನ್ನಡೆ ಸಾಧಿಸಿತು. ಮುಂಬೈ ತಂಡವು 3.2 ಓವರ್‌ಗಳಲ್ಲಿ 1 ವಿಕೆಟ್‌ಗೆ ಈ ಚುಟುಕು ಗುರಿಯನ್ನು ಸಾಧಿಸಿ ಗೆದ್ದಿತು. ಒಟ್ಟು 30 ಅಂಕ ಗಳಿಸಿರುವ ಮುಂಬೈ ಬಳಗವು ಕ್ವಾರ್ಟರ್‌ಫೈನಲ್ ಪ್ರವೇಶಿಸಿತು. ತಂಡಕ್ಕೆ ಇನ್ನೂ ಒಂದು ಪಂದ್ಯ ಬಾಕಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.