ADVERTISEMENT

ಬಾಂಗ್ಲಾದೇಶ ಎದುರಿನ ಟೆಸ್ಟ್‌: ರಷೀದ್‌ ಆಲ್‌ರೌಂಡ್‌ ಆಟ, ಅಫ್ಗಾನಿಸ್ತಾನ ಮೇಲುಗೈ

ಬಾಂಗ್ಲಾದೇಶ ಎದುರಿನ ಟೆಸ್ಟ್‌

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 16:46 IST
Last Updated 6 ಸೆಪ್ಟೆಂಬರ್ 2019, 16:46 IST

ಚಿತ್ತಗಾಂಗ್‌ (ಎಎಫ್‌ಪಿ): ಸ್ಪಿನ್‌ ಪರಿಣತರಷೀದ್‌ ಖಾನ್‌ ಬ್ಯಾಟ್‌ನಿಂದಲೂ, ಚೆಂಡಿನಿಂದಲೂ ಉತ್ತಮ ಪ್ರದರ್ಶನ ನೀಡಿದರು. ಆತಿಥೇಯ ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್‌ನ ಎರಡನೇ ದಿನವಾದ ಶುಕ್ರವಾರ ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಅಫ್ಗಾನಿಸ್ತಾನ ಉತ್ತಮ ಸ್ಥಿತಿಗೆ ತಲುಪಿತು.

ಕೆಳಕ್ರಮಾಂಕದಲ್ಲಿ 61 ಎಸೆತಗಳಲ್ಲಿ 51 ರನ್‌ಗಳ ಉಪಯುಕ್ತ ಅರ್ಧಶತಕ ಹೊಡೆದ ಪರಿಣಾಮ ಬಾಂಗ್ಲಾದೇಶದ ಮೊತ್ತ 342 ರನ್‌ಗಳಿಗೆ ಬೆಳೆಯಿತು. ನಂತರ 47 ರನ್ನಿಗೆ 4 ವಿಕೆಟ್‌ ಪಡೆದರು. ದಿನದಾಟದ ಕೊನೆಗೆ ಆತಿಥೇಯರು 8 ವಿಕೆಟ್‌ಗೆ 194 ರನ್‌ ಗಳಿಸಿ ಪರದಾಡುತಿತ್ತು.

ಬಾಂಗ್ಲಾದೇಶದ ಪರ ಮೊಮಿನುಲ್‌ ಹಕ್‌ ಪ್ರತಿರೋಧ ತೋರಿದ್ದು, 71 ಎಸೆತಗಳ ಇನಿಂಗ್ಸ್‌ನಲ್ಲಿ 52 ರನ್‌ ಹೊಡೆದರು. ಮೊಸಾದಿಕ್‌ ಹುಸೇನ್‌ 44 ರನ್‌ಗಳೊಡನೆ ಅಜೇಯರಾಗುಳಿದು ಬಾಂಗ್ಲಾ. ‘ಕ್ರಿಕೆಟ್‌ ಶಿಶು’ಗಳ ಎದುರು ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಮೊಸಾದಿಕ್‌ ಅವರು ಮುರಿಯದ 9ನೇ ವಿಕೆಟ್‌ಗೆ ತೈಜುಲ್‌ ಇಸ್ಲಾಂ (ಔಟಾಗದೇ 11) ಜೊತೆ 48 ರನ್‌ ಸೇರಿಸಿದ್ದಾರೆ.

ADVERTISEMENT

ಬಾಂಗ್ಲಾದೇಶ, ಪ್ರವಾಸಿ ತಂಡದ ಮೊತ್ತ ದಾಟಬೇಕಾದರೆ ಉಳಿದಿರುವ ಎರಡು ವಿಕೆಟ್‌ಗಳಿಂದ ಇನ್ನೂ 148 ರನ್‌ ಗಳಿಸಬೇಕಾಗಿದೆ.

ಸ್ಕೋರುಗಳು: ಅಫ್ಗಾನಿಸ್ತಾನ: 1ನೇ ಇನಿಂಗ್ಸ್: 117 ಓವರುಗಳಲ್ಲಿ 342 (ರಹಮತ್‌ ಶಾ 102, ಅಸ್ಗರ್‌ ಆಫ್ಗನ್‌ 92, ಅಫ್ಸರ್‌ ಝಝೈ 41, ರಶೀದ್‌ ಖಾನ್‌ 51; ತೈಜುಲ್‌ ಇಸ್ಲಾಂ 116ಕ್ಕೆ4, ಶಕೀಬ್‌ ಅಲ್ ಹಸನ್‌ 64ಕ್ಕೆ2, ನಯೀಮ್‌ ಹಸನ್‌ 43ಕ್ಕೆ2);

ಬಾಂಗ್ಲಾದೇಶ: 1ನೇ ಇನಿಂಗ್ಸ್‌: 67 ಓವರುಗಳಲ್ಲಿ 8 ವಿಕೆಟ್‌ಗೆ 194 (ಲಿಟ್ಟನ್‌ ದಾಸ್‌ 33, ಮೊಮಿನುಲ್‌ ಹಕ್‌ 52, ಮೊಸಾದೆಕ್‌ ಹುಸೇನ್‌ ಬ್ಯಾಟಿಂಗ್‌ 44, ತೈಜುಲ್‌ ಇಸ್ಲಾಂ ಬ್ಯಾಟಿಂಗ್‌ 11; ಮೊಹಮದ್‌ ನಬಿ 53ಕ್ಕೆ2, ರಷೀದ್‌ ಖಾನ್‌ 47ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.