ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಶೀದ್ ಖಾನ್ 100 ವಿಕೆಟ್ ಸಾಧನೆ ಮಾಡಿದ್ದಾರೆ.
ಈ ಮೂಲಕ ಐಪಿಎಲ್ನಲ್ಲಿ 100 ವಿಕೆಟ್ ಗಳಿಸಿದ ವಿದೇಶದ ಎರಡನೇ ಸ್ಪಿನ್ನರ್ ಹಾಗೂ ಒಟ್ಟಾರೆಯಾಗಿ 16ನೇ ಬೌಲರ್ ಎನಿಸಿದ್ದಾರೆ.
ಈ ಪಟ್ಟಿಯಲ್ಲಿ ವೆಸ್ಟ್ಇಂಡೀಸ್ನ ಸ್ಪಿನ್ನರ್ ಸುನಿಲ್ ನಾರಾಯಣ್ ಬಳಿಕ ರಶೀದ್ ಕಾಣಿಸಿಕೊಂಡಿದ್ದಾರೆ. 83ನೇ ಐಪಿಎಲ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಐಪಿಎಲ್ 2022ರಲ್ಲಿ ನೂತನ ಗುಜರಾತ್ ಟೈಟನ್ಸ್ ತಂಡದ ಪರ ಆಡುತ್ತಿರುವ ರಶೀದ್, ಶನಿವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಮರಣೀಯ ಸಾಧನೆ ಮಾಡಿದರು.
ಐಪಿಎಲ್ನಲ್ಲಿ 100 ವಿಕೆಟ್ ಸಾಧಕರು:
1. ಡ್ವೇನ್ ಬ್ರಾವೊ: 179
2. ಲಸಿತ್ ಮಾಲಿಂಗ: 170
3. ಅಮಿತ್ ಮಿಶ್ರಾ: 166
4. ಪಿಯೂಷ್ ಚಾವ್ಲಾ: 157
5. ಯಜುವೇಂದ್ರ ಚಾಹಲ್: 157
6. ಭುವನೇಶ್ವರ್ ಕುಮಾರ್: 151
7. ಹರಭಜನ್ ಸಿಂಗ್: 150
8. ಆರ್. ಅಶ್ವಿನ್: 149
9. ಸುನಿಲ್ ನಾರಾಯಣ್: 149
10. ಜಸ್ಪ್ರೀತ್ ಬೂಮ್ರಾ: 134
11. ರವೀಂದ್ರ ಜಡೇಜ: 132
12. ಉಮೇಶ್ ಯಾದವ್: 130
13. ಸಂದೀಪ್ ಶರ್ಮಾ: 112
14. ವಿನಯ್ ಕುಮಾರ್: 105
15. ಜಹೀರ್ ಖಾನ್: 102
16. ರಶೀದ್ ಖಾನ್: 101
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.