ADVERTISEMENT

IPL- RCB ANTHEM: ಬರುತ್ತಿದೆ ಆರ್‌ಸಿಬಿ ತಂಡಕ್ಕೊಂದು ಸ್ಫೂರ್ತಿ ಗೀತೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 8:41 IST
Last Updated 24 ಮಾರ್ಚ್ 2022, 8:41 IST
ಆರ್‌ಸಿಬಿ ಗೀತೆಯ ಪೋಸ್ಟರ್‌
ಆರ್‌ಸಿಬಿ ಗೀತೆಯ ಪೋಸ್ಟರ್‌   

ಐಪಿಎಲ್‌ ಜ್ವರ ಆರಂಭವಾಗಿಯೇಬಿಟ್ಟಿದೆ. ಮಾರ್ಚ್‌ 26ರಂದು ಕ್ರಿಕೆಟ್‌ ಅಂಗಣ ಕಳೆಗಟ್ಟಲಿದೆ. ಅದಕ್ಕೂ ಮುನ್ನ ಆರ್‌ಸಿಬಿ ತಂಡಕ್ಕಾಗಿ ಸಂಗೀತಗಾರರು ಆರ್‌ಸಿಬಿ ಗೀತೆಯೊಂದನ್ನು ರೂಪಿಸಿದ್ದಾರೆ. ಎಲ್ಲ ಪ್ರಕಾರಗಳ ಸಂಗೀತ ಒಳಗೊಂಡ ಫ್ಯೂಷನ್‌ ಗೀತೆ ಆರ್‌ಸಿಬಿ ತಂಡ ಅಂಗಣ ಪ್ರವೇಶಿಸುವಾಗ ಮೊಳಗಲಿದೆ.

ಶ್ರೀರಾಮ್‌ ಗಂಧರ್ವ ಅವರ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿ ಬಂದಿದೆ. ‘ಖಂಡಿತವಾಗಿಯೂ ಇದು ಆರ್‌ಸಿಬಿ ತಂಡಕ್ಕೆ ಹಾಗೂ ಅದರ ನಿಷ್ಠಾವಂತ ಅಭಿಮಾನಿಗಳಿಗೆ ಹೊಸ ಚೈತನ್ಯ ತುಂಬಲಿದೆ’ ಎಂದಿದ್ದಾರೆ ಗಂಧರ್ವ.

‘ಡಿ ಬೀಟ್ಸ್‌ ಮ್ಯೂಸಿಕ್‌ ಚಾನೆಲ್‌ನಲ್ಲಿ ಈ ಹಾಡು ಒಂದೆರಡು ದಿನಗಳಲ್ಲಿ ಬಿಡುಗಡೆ ಆಗಲಿದೆ’ ಎಂದರು ಅವರು.

ADVERTISEMENT

ಹಾಡಿನ ಧ್ವನಿಗಳಿವು
ಅನಿರುದ್ಧ್‌ ಶೆಟ್ಟಿ, ರ‍್ಯಾಪರ್‌ ಗುಬ್ಬಿ ಹಾಡಿದ್ದಾರೆ. ಹಾಡಿನಲ್ಲಿ ಆರ್‌ಸಿಬಿ ತಂಡದ ಸೂಪರ್‌ ಫ್ಯಾನ್‌ ಸುಕುಮಾರ್‌ ಕೂಡಾ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಆರ್‌ಸಿಬಿ ಗೀತೆಯ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಸುಕುಮಾರ್‌ ಅವರು ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ‘ಇದೊಂದು ವಿಶೇಷ ಪ್ರಕಟಣೆ, ಇದೀಗ ಬಂದಿದ್ದಾರೆ ಆರ್‌ಸಿಬಿ ಫ್ಯಾನ್ಸ್‌...’ ಎಂದು ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಸುಬಾಶಿನಿ ಶ್ರೀನಿವಾಸ್‌ ಅವರು ಈ ಹಾಡಿನ ನಿರ್ಮಾಪಕರು. ವಸಂತ ವಿನುತಾ ಅವರು ನಿರ್ದೇಶಕರು.

ಹಾಡಿನ ಪೋಸ್ಟರ್‌ ಕೂಡಾ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಶೀಘ್ರವೇ ಕುತೂಹಲಕ್ಕೆ ತೆರೆ ಬೀಳಲಿದೆ ಎನ್ನುತ್ತಾರೆ ಗಂಧರ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.