
ಪಿಟಿಐ
ಚೆನ್ನೈ: ಮಧ್ಯಮ ಕ್ರಮಾಂಕದ ಬ್ಯಾಟರ್ ರಿಂಕು ಸಿಂಗ್ ಅವರು ಮಂಗಳವಾರ, ಕುಟುಂಬದ ತುರ್ತು ಕಾರಣ ದಿಢೀರನೇ ತವರಿಗೆ ಮರಳಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ರಿಂಕು ಅವರು ಎಂ.ಎ.ಚಿದಂಬರಮ್ ಕ್ರೀಡಾಂಗಣದಲ್ಲಿ ಭಾರತ ತಂಡದ ತಾಲೀಮಿನಲ್ಲಿ ಕಾಣಲಿಲ್ಲ. ಉಳಿದ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದರು.
ರಿಂಕು ಅವರ ತಂದೆ ಖಾನಚಂದ್ ಸಿಂಗ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಗ್ರೇಟರ್ ನೊಯ್ಡಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಉತ್ತರಪ್ರದೇಶ ಅಲಿಗಢದ ರಿಂಕು ತವರಿಗೆ ಧಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಎಡಗೈ ಬ್ಯಾಟರ್, ಗುರುವಾರ ಜಿಂಬಾಬ್ವೆ ವಿರುದ್ಧ ಆಡುವುದೂ ಅನಮಾನವಾಗಿತ್ತು. ಅಷ್ಟೇನೂ ಲಯದಲ್ಲಿಲ್ಲದ ರಿಂಕು, ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಖಾತೆ ತೆರೆದಿರಲಿಲ್ಲ. ನೆದರ್ಲೆಂಡ್ಸ್, ಪಾಕಿಸ್ತಾನ, ನಮೀಬಿಯಾ ವಿರುದ್ಧವೂ ಅವರು ವಿಫಲರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.