ADVERTISEMENT

ಕ್ರಿಕೆಟ್‌ | ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ರೂಟ್ ಅಲಭ್ಯ?

ಪಿಟಿಐ
Published 3 ಜೂನ್ 2020, 19:30 IST
Last Updated 3 ಜೂನ್ 2020, 19:30 IST
ಜೋ ರೂಟ್ ಮತ್ತು ಬೆನ್‌ ಸ್ಟೋಕ್ಸ್‌ –ಎಎಫ್‌ಪಿ ಚಿತ್ರ
ಜೋ ರೂಟ್ ಮತ್ತು ಬೆನ್‌ ಸ್ಟೋಕ್ಸ್‌ –ಎಎಫ್‌ಪಿ ಚಿತ್ರ   

ನವದೆಹಲಿ: ಮುಂದಿನ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಆಡುವುದು ಸಂದೇಹ. ಅವರ ಪತ್ನಿ ಗರ್ಭಿಣಿಯಾಗಿದ್ದು ಜುಲೈ ತಿಂಗಳಲ್ಲಿ ಹೆರಿಗೆಯಾಗುವ ಸಾಧ್ಯತೆ ಇದೆ. ಈಸಂದರ್ಭದಲ್ಲಿ ಪತ್ನಿಯೊಂದಿಗೆ ಇರಲು ಬಯಸಿರುವುದರಿಂದ ಬೆನ್ ಸ್ಟೋಕ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಕೊರೊನಾ ಹಾವಳಿಯಿಂದಾಗಿ ವೆಸ್ಟ್ ಇಂಡೀಸ್‌ ತಂಡದ ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿಯನ್ನು ಮರುನಿಗದಿಗೊಳಿಸಲಾಗಿತ್ತು. ಇದರ ಪ್ರಕಾರ ಮೊದಲ ಟೆಸ್ಟ್ ಜುಲೈ ಎಂಟರಂದು ಸೌತಾಂಪ್ಟನ್‌ನಲ್ಲಿ ಆರಂಭಗೊಳ್ಳಲಿದೆ. ಆದರೆ ರೂಟ್ ಪತ್ನಿ ಎರಡನೇ ಮಗುವಿಗೆ ಜುಲೈ ಮೊದಲ ವಾರದಲ್ಲಿ ಜನ್ಮನೀಡುವ ಸಾಧ್ಯತೆ ಇದೆ.

‘ಖಚಿತವಾಗಿ ಏನನ್ನೂ ಹೇಳಲಾಗದು. ವೈದ್ಯಕೀಯ ತಂಡದೊಂದಿಗೆ ಸತತ ಮಾತುಕತೆ ನಡೆಯುತ್ತಿದೆ. ಟೆಸ್ಟ್ ಕ್ರಿಕೆಟ್ ಮತ್ತು ಪತ್ನಿಯ ಹೆರಿಗೆಯ ದಿನಾಂಕಗಳು ಬಹುತೇಕ ಹತ್ತಿರ ಇರುವುದು ಗೊಂದಲಕ್ಕೆ ಕಾರಣವಾಗಿದೆ’ ಎಂದು ರೂಟ್ ಹೇಳಿದರು.

ADVERTISEMENT

‘ನನ್ನ ಬದಲಿಗೆ ಬೆನ್‌ ಸ್ಟೋಕ್ಸ್ ತಂಡವನ್ನು ಮುನ್ನಡೆಸುವುದಾದರೆ ಯಾವುದೇ ಆತಂಕವಿಲ್ಲ. ಉಪನಾಯಕನಾಗಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದನ್ನು ಕಂಡಿದ್ದೇನೆ. ಸವಾಲುಗಳು ಎದುರಾದಾಗ ಅವರು ಎದುರಿಸುವ ರೀತಿ ಅನನ್ಯ’ ಎಂದು ರೂಟ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.