ಋತುರಾಜ್ ಗಾಯಕವಾಡ
ಲೀಡ್ಸ್ (ಇಂಗ್ಲೆಂಡ್): ಭಾರತದ ಬ್ಯಾಟರ್ ಋತುರಾಜ್ ಗಾಯಕವಾಡ್ ಅವರು ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಡಿವಿಷನ್ ತಂಡ ಯಾರ್ಕ್‌ಶೈರ್ ಕ್ಲಬ್ ಸೇರಿಕೊಂಡಿದ್ದಾರೆ. ಈ ತಂಡದ ಪರ ಐದು ಪಂದ್ಯಗಳನ್ನು ಆಡಲಿದ್ದಾರೆ. ಏಕದಿನ ಕಪ್‌ನಲ್ಲೂ ಆಡಲಿದ್ದಾರೆ.
ಜುಲೈನಲ್ಲಿ ಸರ್ರೆ ವಿರುದ್ಧದ ಪಂದ್ಯದ ಮೂಲಕ ತಂಡಕ್ಕೆ ಸೇರಲಿದ್ದಾರೆ ಎಂದು ಕ್ಲಬ್ ವೆಬ್‌ಸೈಟ್‌ನಲ್ಲಿ ತಿಳಿಸಿದೆ. 28 ವರ್ಷ ವಯಸ್ಸಿನ ಋತುರಾಜ್ ಪ್ರಸ್ತುತ ಭಾರತ ಎ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದು ನಾಲ್ಕು ದಿನಗಳ ಎರಡು ‘ಟೆಸ್ಟ್’ ಪಂದ್ಯಗಳಲ್ಲಿ ಆಡಿದ್ದಾರೆ.
ರಣಜಿಯಲ್ಲಿ ಮಹಾರಾಷ್ಟ್ರ ತಂಡ ಪ್ರತಿನಿಧಿಸುವ ಅವರು, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕರಾಗಿದ್ದಾರೆ. ಭಾರತ ತಂಡದ ಪರ ಆರು ಏಕದಿನ ಪಂದ್ಯ ಮತ್ತು 23 ಟಿ20 ಪಂದ್ಯಗಳನ್ನು ಆಡಲಿದ್ದಾರೆ.
10 ತಂಡಗಳ ಕೌಂಟಿ ಮೊದಲ ಡಿವಿಷನ್ ಲೀಗ್‌ನಲ್ಲಿ ಯಾರ್ಕ್ಶೈರ್ ಪ್ರಸ್ತುತ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.