ADVERTISEMENT

SA20: ಬ್ರೆವಿಸ್, ರುದರ್‌ಫರ್ಡ್ ಅಬ್ಬರ; ಸತತ ಆರು ಸಿಕ್ಸರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2026, 11:17 IST
Last Updated 1 ಜನವರಿ 2026, 11:17 IST
<div class="paragraphs"><p>ಡೆವಾಲ್ಡ್ ಬ್ರೆವಿಸ್, ಶೆರ್ಫೇನ್ ರುದರ್‌ಫರ್ಡ್</p></div>

ಡೆವಾಲ್ಡ್ ಬ್ರೆವಿಸ್, ಶೆರ್ಫೇನ್ ರುದರ್‌ಫರ್ಡ್

   

ಕೇಪ್ ಟೌನ್: ದಕ್ಷಿಣ ಆಫ್ರಿಕಾ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆರು ಎಸೆತಗಳಲ್ಲಿ ಸತತ ಆರು ಸಿಕ್ಸರ್ ದಾಖಲಾಗಿದೆ.

ಮುಂಬೈ ಇಂಡಿಯನ್ಸ್ ಕೇಪ್ ಟೌನ್ ವಿರುದ್ಧ ನಡೆದ ಪಂದ್ಯದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಬ್ಯಾಟರ್‌ಗಳಾದ ಡೆವಾಲ್ಡ್ ಬ್ರೆವಿಸ್ ಹಾಗೂ ಶೆರ್ಫೇನ್ ರುದರ್‌ಫರ್ಡ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ADVERTISEMENT

ಮೊದಲು ಬ್ಯಾಟಿಂಗ್ ನಡೆಸಿದ ಪ್ರಿಟೋರಿಯಾ ಐದು ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

17ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಬ್ರೆವಿಸ್, ಅಂತಿಮ ಎರಡು ಎಸೆತಗಳಲ್ಲೂ ಸಿಕ್ಸರ್‌ ಗಳಿಸಿದರು. ನಂತರ 18ನೇ ಓವರ್‌ನ ಮೊದಲ ನಾಲ್ಕು ಎಸೆತಗಳಲ್ಲಿ ರುದರ್‌ಫರ್ಡ್ ಸಿಕ್ಸರ್ ಬಾರಿಸಿದರು. ಆ ಮೂಲಕ ಸತತ ಆರು ಎಸೆತಗಳಲ್ಲಿ ಸಿಕ್ಸರ್ ದಾಖಲಾದವು.

ರುದರ್‌ಫರ್ಡ್ 15 ಎಸೆತಗಳಲ್ಲಿ ಅಜೇಯ 47 ರನ್ ಗಳಿಸಿದರೆ ಬ್ರೆವಿಸ್ 13 ಎಸೆತಗಳಲ್ಲಿ 36 ರನ್ ಗಳಿಸಿ ಔಟಾಗದೆ ಉಳಿದರು. ರುದರ್‌ಫರ್ಡ್ ಆರು ಹಾಗೂ ಬ್ರೆವಿಸ್ ನಾಲ್ಕು ಸಿಕ್ಸರ್ ಗಳಿಸಿದರು. ಅವರಿಬ್ಬರು ಮುರಿಯದ ಆರನೇ ವಿಕೆಟ್‌ಗೆ 27 ಎಸೆತಗಳಲ್ಲಿ 86 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಈ ಗುರಿ ಬೆನ್ನಟ್ಟಿದ ಕೇಪ್ ಟೌನ್, 14.2 ಓವರ್‌ಗಳಲ್ಲಿ 135 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಮೂಲಕ ಪ್ರಿಟೋರಿಯಾ 85 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.