ADVERTISEMENT

ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್‌ನ ನೂರನೇ ಶತಕ ಸಿಡಿಸಿದ್ದು ಇದೇ ದಿನ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 9:54 IST
Last Updated 16 ಮಾರ್ಚ್ 2020, 9:54 IST
   

ವಿಶ್ವ ಕ್ರಿಕೆಟ್‌ನ ಬ್ಯಾಟಿಂಗ್ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರುಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರನೇ ಶತಕ ಗಳಿಸಿ ಇಂದಿಗೆ ಸರಿಯಾಗಿ ಎಂಟು ವರ್ಷ ಕಳೆದವು.

ಟೆಸ್ಟ್‌ ಕ್ರಿಕೆಟ್‌ನಲ್ಲಿ 51 ಹಾಗೂ ಏಕದಿನ ಮಾದರಿಯಲ್ಲಿ 49 ಶತಕಗಳಿರುವ ಸಚಿನತ್‌ ನೂರನೇ ಸಲ ಮೂರಂಕಿ ಮುಟ್ಟಿದ್ದು, ಬಾಂಗ್ಲಾದೇಶದ ವಿರುದ್ಧ. 2012ರ ಮಾರ್ಚ್‌ 16ರಂದು ಬಾಂಗ್ಲಾ ವಿರುದ್ಧ ಮೀರತ್‌ನಲ್ಲಿ ನಡೆದ ಪಂದ್ಯದಲ್ಲಿ ಅವರು 100ನೇ ಶತಕ ಸಿಡಿಸಿದರು.

ಈ ಪಂದ್ಯದಲ್ಲಿ ಬರೋಬ್ಬರಿ 147 ಎಸೆತಗಳನ್ನು ಎದುರಿಸಿದ್ದ ಅವರಯ, 12 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 114ರನ್‌ ಬಾರಿದ್ದರು. ಸಚಿನ್ ಬ್ಯಾಟಿಂಗ್ ಬಲದಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 289 ರನ್ ಕಲೆಹಾಕಿತ್ತು. ಬಾಂಗ್ಲಾ ತಂಡಈ ಮೊತ್ತವನ್ನು 5 ವಿಕೆಟ್‌ ಅಂತರದಿಂದ ಗೆದ್ದು ಬೀಗಿತ್ತು.

ADVERTISEMENT

ಸಚಿನ್‌ರ ನೂರರ ಸಾಧನೆಯನ್ನು ಐಸಿಸಿ ಟ್ವೀಟ್‌ ಮಾಡುವ ಮೂಲಕ ನೆನಪಿಸಿದೆ.

2013ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಸಚಿನ್‌, ಭಾರತ ಪರ 200 ಟೆಸ್ಟ್‌, 463 ಏಕದಿನ ಮತ್ತು 1ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 15,921 ರನ್‌, 18426ರನ್‌ ಹಾಗೂ 10 ರನ್ ಗಳಿಸಿದ್ದಾರೆ.

ಒಟ್ಟಾರೆ ಹೆಚ್ಚು ಶತಕ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿಪಾಂಟಿಂಗ್‌ (71) ಮತ್ತು ಭಾರತದ ಈಗಿನ ನಾಯಕ ವಿರಾಟ್‌ ಕೊಹ್ಲಿ(70) ಕ್ರಮವಾಗಿ 2 ಮತ್ತು 3ನೇ ಸ್ಥಾನಗಳಲ್ಲಿದ್ದಾರೆ.

ಕೊಹ್ಲಿ ಸಚಿನ್‌ ದಾಖಲೆ ಮುರಿಯಬಲ್ಲ ಆಟಗಾರ ಎನಿಸಿಕೊಂಡಿದ್ದು, ಟೆಸ್ಟ್‌ನಲ್ಲಿ 27 ಹಾಗೂ ಏಕದಿನ ಮಾದರಿಯಲ್ಲಿ 43 ಸಲ ಮೂರಂಕಿ ದಾಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.