ADVERTISEMENT

ಲೆಜೆಂಡ್ಸ್ ಲೀಗ್‌ ಕ್ರಿಕೆಟ್‌ಗೆ ಸಚಿನ್ ತೆಂಡೂಲ್ಕರ್ ಇಲ್ಲ

ಪಿಟಿಐ
Published 9 ಜನವರಿ 2022, 3:27 IST
Last Updated 9 ಜನವರಿ 2022, 3:27 IST
ಸಚಿನ್ ತೆಂಡೂಲ್ಕರ್‌– ಎಎಫ್‌ಪಿ ಚಿತ್ರ
ಸಚಿನ್ ತೆಂಡೂಲ್ಕರ್‌– ಎಎಫ್‌ಪಿ ಚಿತ್ರ   

ನವದೆಹಲಿ:ಭಾರತ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಮುಂಬರುವ ಲೆಜೆಂಡ್ಸ್ ಲೀಗ್‌ ಕ್ರಿಕೆಟ್‌ (ಎಲ್‌ಎಲ್‌ಸಿ) ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಎಸ್‌ಆರ್‌ಟಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್ ಸ್ಪಷ್ಟಪಡಿಸಿದೆ.

ಎಲ್ಎಲ್‌ಸಿಯು ನಿವೃತ್ತ ಆಟಗಾರರು ಕಣಕ್ಕಿಳಿಯುವ ವೃತ್ತಿಪರ ಲೀಗ್ ಆಗಿದೆ. ಲೀಗ್‌ನಲ್ಲಿ ಆಡುವಭಾರತದ ಆಟಗಾರರ ತಂಡವನ್ನು ಇತ್ತೀಚೆಗೆ ಪ್ರಕಟಿಸಲಾಗಿತ್ತು.

ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ ಅವರನ್ನು ಒಳಗೊಂಡ ಪ್ರಚಾರದ ವಿಡಿಯೊವೊಂದರಲ್ಲಿ ತೆಂಡೂಲ್ಕರ್ ಕೂಡ ಲೀಗ್‌ನ ಭಾಗವಾಗಲಿದ್ದಾರೆ ಎಂದು ತೋರಿಸಲಾಗಿತ್ತು. ಆದರೆ ಇದನ್ನು ಎಸ್‌ಆರ್‌ಟಿ ಎಸ್‌ಆರ್‌ಟಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ ವಕ್ತಾರರು ತಿರಸ್ಕರಿಸಿದ್ದಾರೆ.

ADVERTISEMENT

ಎಲ್‌ಎಲ್‌ಸಿ ಇದೇ 20ರಂದು ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.