ADVERTISEMENT

ಸ್ಮಿತ್‌ ಬ್ಯಾಟಿಂಗ್ ಶೈಲಿಯೇ ಸವಾಲು: ಸಚಿನ್ ತೆಂಡೂಲ್ಕರ್

ಪಿಟಿಐ
Published 24 ನವೆಂಬರ್ 2020, 15:11 IST
Last Updated 24 ನವೆಂಬರ್ 2020, 15:11 IST
ಸ್ಟೀವ್ ಸ್ಮಿತ್
ಸ್ಟೀವ್ ಸ್ಮಿತ್   

ನವದೆಹಲಿ: ಸ್ಟೀವನ್ ಸ್ಮಿತ್ ಅವರ ಬ್ಯಾಟಿಂಗ್ ಸಾಮರ್ಥ್ಯ ಅಸಾಮಾನ್ಯ. ಆದ್ದರಿಂದ ಅವರು ರನ್ ಗಳಿಸದಂತೆ ತಡೆಯುವುದು ಮತ್ತು ಅವರ ವಿಕೆಟ್ ಪಡೆಯಲು ತಂತ್ರ ಹೂಡುವ ಸವಾಲು ಭಾರತದ ಬೌಲರ್‌ಗಳ ಮುಂದೆ ಇದೆ ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ವಿರುದ್ಧ ಈ ವರೆಗಿನ ಎಲ್ಲ ಪಂದ್ಯಗಳಲ್ಲೂ ಅಮೋಘ ಸಾಮರ್ಥ್ಯ ಮೆರೆದಿರುವ ಸ್ಮಿತ್ 2018–19ರಲ್ಲಿ ನಡೆದ ಭಾರತ–ಆಸ್ಟ್ರೇಲಿಯಾ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಆಗ ಅವರು ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು.

ಸಾಮಾನ್ಯವಾಗಿ ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕೆ ಇಳಿಯುವಾಗ ಆಫ್‌ಸ್ಟಂಪ್ ಮೇಲೆ ಅಥವಾ ಆಫ್‌ಸ್ಟಂಪಿನಿಂದ ಹೊರಗೆ ಬೌಲಿಂಗ್ ಮಾಡುವಂತೆ ಸೂಚಿಸಲಾಗುತ್ತದೆ. ಹೆಚ್ಚೆಂದರೆ ಕಾಲ್ಪನಿಕ ನಾಲ್ಕನೇ ಸ್ಟಂಪ್‌ ಮೇಲೆ ಹಾಕಲು ಹೇಳಲಾಗುತ್ತದೆ. ಆದರೆ ಸ್ಮಿತ್ ಅವರ ಬ್ಯಾಟಿಂಗ್ ಶೈಲಿಗೆ ಕಾಲ್ಪನಿಕ ಐದನೇ ಸ್ಟಂಪ್ ಮೇಲೆ ಬೌಲಿಂಗ್ ಮಾಡಬೇಕಾದೀತು ಎಂದು ಸಚಿನ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.