ADVERTISEMENT

ರಸ್ತೆ ಸುರಕ್ಷತಾ ವಿಶ್ವ ಸರಣಿ ಕ್ರಿಕೆಟ್‌: ಇಂಡಿಯಾ ಲೆಜೆಂಡ್ಸ್‌ಗೆ ಸಚಿನ್ ನಾಯಕ

ಪಿಟಿಐ
Published 1 ಸೆಪ್ಟೆಂಬರ್ 2022, 19:30 IST
Last Updated 1 ಸೆಪ್ಟೆಂಬರ್ 2022, 19:30 IST
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್    

ಮುಂಬೈ: ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ರಸ್ತೆ ಸುರಕ್ಷತಾ ವಿಶ್ವ ಸರಣಿ ಕ್ರಿಕೆಟ್‌ನಲ್ಲಿ ಹಾಲಿ ಚಾಂಪಿಯನ್‌ ಇಂಡಿಯಾ ಲೆಜೆಂಡ್ಸ್‌ ತಂಡದ ನಾಯಕತ್ವ ವಹಿಸುವರು.

ಇದೇ 10ರಿಂದ ಆರಂಭವಾಗಲಿರುವ ಟೂರ್ನಿಯು 22 ದಿನಗಳವರೆಗೆ ನಡೆಯಲಿದೆ. ಬೇರೆ ಬೇರೆ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯವು ಕಾನ್ಪುರದಲ್ಲಿ ನಡೆಯುವುದು. ಎರಡು ಸೆಮಿಫೈನಲ್ ಹಾಗೂ ಅ. 1ರಂದು ಫೈನಲ್ ಪಂದ್ಯವನ್ನು ರಾಯಪುರದಲ್ಲಿ ಆಯೋಜಿಸಲಾಗಿದೆ.

ಈ ಬಾರಿ ನ್ಯೂಜಿಲೆಂಡ್ ಲೆಜೆಂಡ್ಸ್‌ ತಂಡವು ಸೇರ್ಪಡೆಗೊಂಡಿದೆ. ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ದೇಶಗಳ ದಿಗ್ಗಜ ಕ್ರಿಕೆಟಿಗರೂ ಈ ಟೂರ್ನಿಯಲ್ಲಿ ಆಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.