ADVERTISEMENT

ಕ್ರಿಕೆಟ್: ದಕ್ಷಿಣ ಆಫ್ರಿಕಾಕ್ಕೆ ಸರೆಲ್, ಟೋನಿ ಆಸರೆ

ಏಜೆನ್ಸೀಸ್
Published 6 ಡಿಸೆಂಬರ್ 2021, 16:38 IST
Last Updated 6 ಡಿಸೆಂಬರ್ 2021, 16:38 IST
ಖಯಾ ಜೊಂಡೊ –ಪ್ರಜಾವಾಣಿ ಸಂಗ್ರಹ ಚಿತ್ರ
ಖಯಾ ಜೊಂಡೊ –ಪ್ರಜಾವಾಣಿ ಸಂಗ್ರಹ ಚಿತ್ರ   

ಬ್ಲೂಮ್‌ಫೌಂಟೇನ್‌: ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಆಫ್ರಿಕಾ ‘ಎ’ ತಂಡಕ್ಕೆ ಆರಂಭಿಕ ಬ್ಯಾಟರ್‌ ಸರೆಲ್ ಎರ್ವಿ (75; 180 ಎಸೆತ, 8 ಬೌಂಡರಿ) ಮತ್ತು ನಾಲ್ಕನೇ ಕ್ರಮಾಂಕದ ಟೋನಿ ಜಾರ್ಜಿ (58; 104ಎ, 8 ಬೌಂ) ಆಸರೆಯಾದರು.

ಸೋಮವಾರ ಆರಂಭಗೊಂಡ ಭಾರತ ‘ಎ’ ಎದುರಿನ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ‘ಎ’ ತಂಡ 89 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 249 ರನ್ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ‘ಎ’ ತಂಡಕ್ಕೆ ನವದೀಪ್ ಸೈನಿ ಆರಂಭದಲ್ಲೇ ಆಘಾತ ನೀಡಿದರು. ತಂಡದ ಮೊತ್ತ 11 ರನ್ ಆಗಿದ್ದಾಗ ನಾಯಕ ಪೀಟರ್ ಮಲಾನ್ ಶೂನ್ಯಕ್ಕೆ ಔಟಾದರು. ಜುಬೇರ್ ಹಂಝ ಕೂಡ ಬೇಗನೇ ಮರಳಿದರು.

ADVERTISEMENT

ಈ ಸಂದರ್ಭದಲ್ಲಿ ಜೊತೆಗೂಡಿದ ಎರ್ವಿ ಮತ್ತು ಟೋನಿ 111 ರನ್‌ಗಳ ಜೊತೆಯಾಟವಾಡಿದರು. ಬದಲಿ ಆಟಗಾರ ಯಾದವ್ ಅವರ ಚುರುಕಿನ ಫೀಲ್ಡಿಂಗ್‌ಗೆ ಟೋನಿ ರನೌಟ್ ಆದರು. ಸೈನಿ ಎಸೆತದಲ್ಲಿ ದೇವದತ್ತ ಪಡಿಕ್ಕಲ್ ಪಡೆದ ಕ್ಯಾಚ್‌ಗೆ ಎರ್ವಿ ವಿಕೆಟ್ ಕಳೆದುಕೊಂಡರು. ನಂತರ ಖಯಾ ಜೊಂಡೊ (56; 98 ಎ, 8 ಬೌಂ, 1 ಸಿಕ್ಸರ್) ತಂಡದ ರಕ್ಷಣೆಗೆ ನಿಂತರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ ‘ಎ’, ಮೊದಲ ಇನಿಂಗ್ಸ್‌: 89 ಓವರ್‌ಗಳಲ್ಲಿ 7ಕ್ಕೆ 249 (ಸರೆಲ್ ಎರ್ವಿ 75, ಜುಬೇರ್ ಹಂಝ 16, ಟೋನಿ ಜಾರ್ಜಿ 58, ಖಯಾ ಜೊಂಡೊ 56, ಶಿನೆತೆಂಬ ಕ್ವೆಸಿಲೆ 22; ದೀಪಕ್ ಚಾಹರ್ 35ಕ್ಕೆ1, ನವದೀಪ್ ಸೈನಿ 42ಕ್ಕೆ3, ಸೌರಭ್ ಕುಮಾರ್ 52ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.