ADVERTISEMENT

ಆಸ್ಟ್ರೇಲಿಯಾ–ಸ್ಕಾಟ್ಲೆಂಡ್ ಟ್ವೆಂಟಿ–20 ಪಂದ್ಯ ರದ್ದತಿಗೆ ನಿರ್ಧಾರ

ಪಿಟಿಐ
Published 17 ಜೂನ್ 2020, 13:41 IST
Last Updated 17 ಜೂನ್ 2020, 13:41 IST
ಆಸ್ಟ್ರೇಲಿಯಾ ಎದುರು ಟ್ವೆಂಟಿ–20 ಪಂದ್ಯ ಆಡುವ ಅವಕಾಶವನ್ನು ಸ್ಕಾಟ್ಲೆಂಡ್ ತಂಡ ಕಳೆದುಕೊಂಡಿದೆ –ರಾಯಿಟರ್ಸ್ ಚಿತ್ರ
ಆಸ್ಟ್ರೇಲಿಯಾ ಎದುರು ಟ್ವೆಂಟಿ–20 ಪಂದ್ಯ ಆಡುವ ಅವಕಾಶವನ್ನು ಸ್ಕಾಟ್ಲೆಂಡ್ ತಂಡ ಕಳೆದುಕೊಂಡಿದೆ –ರಾಯಿಟರ್ಸ್ ಚಿತ್ರ   

ಎಡಿನ್‌ಬರ್ಗ್: ಆಸ್ಟ್ರೇಲಿಯಾ ಎದುರುಇದೇ ತಿಂಗಳ 29ರಂದು ನಡೆಯಬೇಕಾಗಿದ್ದ ಸ್ಕಾಟ್ಲೆಂಡ್ ತಂಡದ ಏಕೈಕ ಟ್ವೆಂಟಿ–20 ಪಂದ್ಯವನ್ನು ರದ್ದು ಮಾಡಲಾಗಿದೆ. ಕೊರೊನಾ ಹಾವಳಿಯಿಂದಾಗಿ ಪಂದ್ಯಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಆಗಲಿಲ್ಲ ಎಂದು ಸ್ಕಾಟ್ಲೆಂಡ್‌ ಕ್ರಿಕೆಟ್ ಮಂಡಳಿ ಬುಧವಾರ ತಿಳಿಸಿದೆ.

ಇಂಗ್ಲೆಂಡ್ ಎದುರಿನ ಏಕದಿನ ಸರಣಿಗೂ ಮೊದಲು ದಿ ಗ್ರೇಂಜ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ಸ್ಕಾಟ್ಲೆಂಡ್ ಮುಖಾಮುಖಿ ಆಯೋಜನೆಯಾಗಿತ್ತು.

ಕೊರೊನಾ ಹಾವಳಿಯಿಂದಾಗಿ ಉಂಟಾಗಿರುವ ವಿಷಮ ಪರಿಸ್ಥಿತಿಯಿಂದಾಗಿ ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಈ ನಿರ್ಧಾರಕ್ಕೆ ಬಂದಿವೆ. ಬಯೋಸೆಕ್ಯುರ್ ವ್ಯವಸ್ಥೆಯಲ್ಲಿ ನಡೆಸಲು ಉದ್ದೇಶಿಸಿರುವ ಏಕದಿನ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಬದಲಿಸುವ ಕುರಿತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ನಡುವೆ ಮಾತುಕತೆ ನಡೆಯುತ್ತಿದೆ.

ADVERTISEMENT

‘ಇದು ಬೇಸರದ ವಿಷಯ. ಪಂದ್ಯ ಆಯೋಜಿಸುವುದಕ್ಕಾಗಿ ಸಾಧ್ಯವಾದಷ್ಟು ಪ್ರಯತ್ನಿಸಿದ್ದೇವೆ. ಆದರೆ ಕೊನೆಗೆ ಕೈಬಿಡಬೇಕಾಗಿ ಬಂತು’ ಎಂದು ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಸ್ ಮೆಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.