ADVERTISEMENT

BAN vs SL: ಧನಂಜಯ, ಮೆಂಡಿಸ್‌ ಶತಕ

ಪಿಟಿಐ
Published 22 ಮಾರ್ಚ್ 2024, 14:10 IST
Last Updated 22 ಮಾರ್ಚ್ 2024, 14:10 IST
<div class="paragraphs"><p>ಧನಂಜಯ ಡಿ ಸಿಲ್ವ</p></div>

ಧನಂಜಯ ಡಿ ಸಿಲ್ವ

   

(ಚಿತ್ರ ಕೃಪೆ: X/@OfficialSLC)

ಸಿಲ್ಹೆಟ್‌ (ಬಾಂಗ್ಲಾದೇಶ): ಸಕಾಲದಲ್ಲಿ ನಾಯಕ ಧನಂಜಯ ಡಿ ಸಿಲ್ವ ಮತ್ತು ಕಮಿಂದು ಮೆಂಡಿಸ್‌ (ತಲಾ 102) ಶತಕಗಳನ್ನು ದಾಖಲಿಸಿ ಶ್ರೀಲಂಕಾ ತಂಡ ಮೊದಲ ಟೆಸ್ಟ್‌ನಲ್ಲಿ 280 ರನ್‌ಗಳ ಉತ್ತಮ ಮೊತ್ತ ಗಳಿಸಲು ನೆರವಾದರು. ನಂತರ ಆ ತಂಡದ ವೇಗಿಗಳು ಬಾಂಗ್ಲಾ ಬ್ಯಾಟ್ಸಮನ್ನರನ್ನು ಕಾಡಿ ತಂಡಕ್ಕೆ ಮೇಲುಗೈ ಒದಗಿಸಿದರು.

ADVERTISEMENT

ಶುಕ್ರವಾರ ಆಟ ಮುಗಿದಾಗ ಆತಿಥೇಯ ತಂಡ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 32 ರನ್ ಗಳಿಸಿ ಪರದಾಡುತ್ತಿದೆ. ಪ್ರವಾಸಿ ತಂಡದ ಮೊತ್ತಕ್ಕಿಂತ ಇನ್ನೂ 248 ರನ್ ಹಿಂದೆಯಿದೆ. ವಿಶ್ವ ಫೆರ್ನಾಂಡೊ ಎರಡು ವಿಕೆಟ್ ಪಡೆದರು.

ಇದಕ್ಕೆ ಮೊದಲು ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಲಂಕಾ ಆರಂಭದಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಅಪಾಯದಲ್ಲಿತ್ತು. ನಾಯಕ ಧನಂಜಯ ಡಿ ಸಿಲ್ವ ಮತ್ತು ಕಮಿಂದು ಮೆಂಡಿಸ್‌ ಆರನೇ ವಿಕೆಟ್‌ಗೆ 202 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಲಂಚ್‌ ನಂತರ ಇವರಿಬ್ಬರದೇ ಆಟವಾಗಿತ್ತು. ಮೂರು ಸಿಕ್ಸರ್‌, 11 ಬೌಂಡರಿಗಳನ್ನು ಬಾರಿಸಿದ ಕಮಿಂದು ಅವರಿಗೆ ಇದು ಚೊಚ್ಚಲ ಶತಕ. ಧನಂಜಯ ಅವರ 12ನೇ ಶತಕದಲ್ಲಿ ಒಂದು ಸಿಕ್ಸರ್‌, 12 ಬೌಂಡರಿಗಳಿದ್ದವು.

ಸ್ಕೋರುಗಳು: ಮೊದಲ ಇನಿಂಗ್ಸ್: ಶ್ರೀಲಂಕಾ: 68 ಓವರುಗಳಲ್ಲಿ 280 (ಧನಂಜಯ ಡಿಸಿಲ್ವ 102, ಕಮಿಂದು ಮೆಂಡಿಸ್‌ 102; ಖಾಲಿದ್‌ ಅಹ್ಮದ್ 72ಕ್ಕೆ3, ನಹಿದ್ ರಾಣಾ 87ಕ್ಕೆ3); ಬಾಂಗ್ಲಾದೇಶ: 10 ಓವರುಗಳಲ್ಲಿ 3 ವಿಕೆಟ್‌ಗೆ 32 (ವಿಶ್ವ ಫೆರ್ನಾಂಡೊ 9ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.