
ಪಿಟಿಐ
ಚಂಡೀಗಢ: ಏಕದಿನ ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡದ ಬ್ಯಾಟರ್ ಶಫಾಲಿ ವರ್ಮಾ ಅವರನ್ನು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಬುಧವಾರ ತಮ್ಮ ಅಧಿಕೃತ ನಿವಾಸದಲ್ಲಿ ಸನ್ಮಾನಿಸಿದರು.
ಶಾಲು ಹೊದಿಸಿ, ₹1.5 ಕೋಟಿ ಮೊತ್ತದ ಚೆಕ್ ನೀಡಿ ಗೌರವಿಸಿದರು. ಅವರನ್ನು ಹರಿಯಾಣ ರಾಜ್ಯ ಮಹಿಳಾ ಆಯೋಗದ ಪ್ರಚಾರ ರಾಯಭಾರಿಯನ್ನಾಗಿಯೂ ನೇಮಕ ಮಾಡಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
‘ವಿಶ್ವಕಪ್ ಚಾಂಪಿಯನ್ ಆದ ಭಾರತ ತಂಡದ ಆಟಗಾರ್ತಿ, ಹರಿಯಾಣದ ಹೆಮ್ಮೆಯ ಪುತ್ರಿ ಶಫಾಲಿ ವರ್ಮಾ ಅವರನ್ನು ಬುಧವಾರ ಭೇಟಿಯಾಗಿ ಅಮೋಘ ಸಾಧನೆಗಾಗಿ ಅಭಿನಂದಿಸಿದೆ’ ಎಂದು ಸೈನಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.