ADVERTISEMENT

ಏಷ್ಯಾಕಪ್ ಕ್ರಿಕೆಟ್ | ಪಾಕಿಸ್ತಾನ ತಂಡಕ್ಕೆ ಶಾಹೀನ್ ಶಾ ಆಫ್ರಿದಿ ಅಲಭ್ಯ

ಪಿಟಿಐ
Published 20 ಆಗಸ್ಟ್ 2022, 21:07 IST
Last Updated 20 ಆಗಸ್ಟ್ 2022, 21:07 IST

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಮೊಣಕಾಲಿಗೆ ಆಗಿರುವ ಗಾಯದಿಂದಾಗಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಹಾಗೂ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ತಂಡದ ಬೌಲಿಂಗ್ ವಿಭಾಗ ಸೊರಗಿದೆ.

‘ಶಾಹೀನ್‌ಗೆ ಗಾಯದಿಂದ ಚೇತರಿಸಿಕೊಳ್ಳಲು ಆರು ವಾರಗಳ ವಿಶ್ರಾಂತಿ ಬೇಕಿದೆಯೆಂದು ವೈದ್ಯರ ತಂಡವು ತಿಳಿಸಿದೆ. ಆದ್ದರಿಂದ ಅವರನ್ನು ತಂಡದಿಂದ ಕೈಬಿಡಲಾಗಿದೆ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT