ADVERTISEMENT

ಐಸಿಸಿ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿದ ಶಶಾಂಕ್; ಹಂಗಾಮಿಯಾಗಿ ಇಮ್ರಾನ್ ಖ್ವಾಜಾ

ಪಿಟಿಐ
Published 1 ಜುಲೈ 2020, 13:56 IST
Last Updated 1 ಜುಲೈ 2020, 13:56 IST
ಶಶಾಂಕ್ ಮನೋಹರ್
ಶಶಾಂಕ್ ಮನೋಹರ್   

ದುಬೈ: ಶಶಾಂಕ್ ಮನೋಹರ್ ಅವರು ಬುಧವಾರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯಸ್ಥರ ಹುದ್ದೆಯನ್ನು ತ್ಯಜಿಸಿದ್ದಾರೆ.

ಮುಂದಿನ ಮುಖ್ಯಸ್ಥರ ಚುನಾವಣೆ ಪ್ರಕ್ರಿಯೆ ನಡೆಯುವವರೆಗೂ ಉಪ ಮುಖ್ಯಸ್ಥರಾಗಿರುವ ಇಮ್ರಾನ್ ಖ್ವಾಜಾ ಹಂಗಾಮಿ ಮುಖ್ಯಸ್ಥರಾಗಲಿದ್ದಾರೆ. ನಾಗಪುರದ ಶಶಾಂಕ್ ಐಸಿಸಿಗೆ ನೇಮಕವಾದ ಮೊದಲ ಸ್ವತಂತ್ರ ಮುಖ್ಯಸ್ಥರಾಗಿದ್ದರು

’ಎರಡು ವರ್ಷಗಳ ಎರಡು ಅವಧಿಯನ್ನು ಮುಕ್ತಾಯಗೊಳಿಸಿದ್ದಾರೆ. ಅವರಾಗಿಯೇ ಈ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಡೆದ ಮಂಡಳಿ ಸಭೆಯಲ್ಲಿ ಇಮ್ರಾನ್ ಖ್ವಾಜಾ ಅವರನ್ನು ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ‘ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಮುಖ್ಯಸ್ಥರಿಗೆ ಗರಿಷ್ಠ ಮೂರು ಅವಧಿಯಲ್ಲಿ(ಆರು ವರ್ಷ) ಕಾರ್ಯನಿರ್ವಹಿಸುವ ಅವಕಾಶ ಇದೆ. ಶಶಾಂಕ್ ಅವರು ಇನ್ನೂ ಒಂದು ವರ್ಷ ಐಸಿಸಿ ಮುಖ್ಯಸ್ಥರಾಗಿ ಇರಬಹುದಿತ್ತು. ಆದರೆ, ಮುಂದುವರಿಯದಿರಲು ಶಶಾಂಕ್ ಅವರೇ ನಿರ್ಧಾರ ಕೈಗೊಂಡಿದ್ದಾರೆ.

ಮುಂದಿನ ವಾರದಲ್ಲಿ ಐಸಿಸಿ ಮಂಡಳಿ ಸಭೆಯಲ್ಲಿ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.