ADVERTISEMENT

ಧವನ್‌ಗೆ ವಿಶ್ವಕಪ್‌ ಗೆಲ್ಲುವ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 19:08 IST
Last Updated 16 ಏಪ್ರಿಲ್ 2019, 19:08 IST
ಶಿಖರ್ ಧವನ್‌  –ಪಿಟಿಐ ಚಿತ್ರ
ಶಿಖರ್ ಧವನ್‌  –ಪಿಟಿಐ ಚಿತ್ರ   

ನವದೆಹಲಿ:ವಿಶ್ವಕಪ್‌ಗೆ ಭಾರತ ಬಲವಾದ ತಂಡವನ್ನು ಹೊಂದಿದ್ದು, ಕಪ್‌ ಗೆಲ್ಲುವ ವಿಶ್ವಾಸವನ್ನು ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ವ್ಯಕ್ತಪಡಿಸಿದ್ದಾರೆ.

ತಂಡವು ಸಮತೋಲನದಿಂದ ಕೂಡಿದ್ದು, ಎಲ್ಲ ವಿಭಾಗದಲ್ಲೂ ತಂಡ ಸಾಮರ್ಥ್ಯ ತೋರಲಿದೆ.ಇಂಗ್ಲೆಂಡ್‌ ಪಿಚ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದೇವೆ ಎಂದು ಫೋರ್ಟಿಸ್‌ ಹೆಲ್ತ್‌ಕೇರ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹಮ್ಮಿಕೊಂಡಿದ್ದ ‘ಅಂಗಾಗ ದಾನ ಜಾಗೃತಿ’ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.

ಚಾಹಲ್‌, ಕಾರ್ತಿಕ್‌ ಸಂತಸ:ತಂಡದಲ್ಲಿ ಸ್ಥಾನ ಪಡೆದಿರುವುದಕ್ಕೆ ದಿನೇಶ್‌ ಕಾರ್ತಿಕ್‌, ಯಜುವೇಂದ್ರ ಚಾಹಲ್‌ ಸಂತಸ ವ್ಯಕ್ತಪಡಿಸಿದ್ದಾರೆ. ‘ವಿಶ್ವಕಪ್‌ ತಂಡದಲ್ಲಿ ಮತ್ತೆ ಸ್ಥಾನ ಗಿಟ್ಟಿಸುವುದು ನನ್ನ ದಶಕದ ಕನಸು. ಇದೀಗ ನನಸಾಗಿದೆ’ ಎಂದು ತಮ್ಮ ಆಯ್ಕೆಯ ಕುರಿತುಕಾರ್ತಿಕ್‌ ಅವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

2007ರ ವಿಶ್ವಕಪ್‌ ತಂಡದಲ್ಲಿ ಕಾರ್ತಿಕ್‌ ಇದ್ದರು. ಎರಡನೇ ವಿಕೆಟ್‌ ಕೀಪರ್‌ ಸ್ಥಾನಕ್ಕೆರಿಷಭ್‌ ಪಂತ್‌ ಬದಲು 33 ವಯಸ್ಸಿನ ಕಾರ್ತಿಕ್‌ ಅವರನ್ನು ಆಯ್ಕೆ ಸಮಿತಿ ಪರಿಗಣಿಸಿತ್ತು.

‘ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದು ಹರ್ಷ ತಂದಿದೆ. ಇದೇ ಖುಷಿಯಲ್ಲಿ ಐಪಿಎಲ್‌ನಲ್ಲೂ ಉತ್ತಮ ಆಟ ತೋರುತ್ತೇನೆ’ ಎಂದು ಮತ್ತೊಬ್ಬ ಆಟಗಾರ ಚಾಹಲ್‌ ಹೇಳಿದ್ದಾರೆ. 41 ಏಕದಿನ ಪಂದ್ಯಗಳಿಂದ 72 ವಿಕೆಟ್‌ ಕಬಳಿಸಿರುವ ಚಾಹಲ್‌,ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 27ಕ್ಕೆ 2 ವಿಕೆಟ್‌ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.