ADVERTISEMENT

ಗಂಗೂಲಿ ಅವರಿಂದ ಕಲಿತದ್ದು ಧಾರಾಳ: ಧವನ್‌

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 19:44 IST
Last Updated 25 ಏಪ್ರಿಲ್ 2019, 19:44 IST
ಶಿಖರ್ ಧವನ್‌
ಶಿಖರ್ ಧವನ್‌   

ಮುಂಬೈ (ಪಿಟಿಐ): ‘ಐಪಿಎಲ್‌ನಲ್ಲಿ ಈ ವರೆಗೆ ಕೋಚ್ ರಿಕಿ ಪಾಂಟಿಂಗ್ ಮತ್ತು ಸಲಹೆಗಾರ ಸೌರವ್ ಗಂಗೂಲಿ ಅವ
ರಿಂದ ಸಾಕಷ್ಟು ಕಲಿತಿದ್ದೇನೆ. ಇದು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಮರ್ಥ್ಯ ತೋರಲು ಸಹಕಾರಿಯಾಗಲಿದೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಶಿಖರ್‌ ಧವನ್ ಹೇಳಿದರು.

ರಿಕಿ ಪಾಂಟಿಂಗ್‌ ಮತ್ತು ಸೌರವ್ ಗಂಗೂಲಿ ಅವರ ಬಳಿ ತರಬೇತಿ ಮತ್ತು ಸಲಹೆ ಪಡೆಯಲು ಸಾಧ್ಯವಾಗುತ್ತಿರು
ವುದು ನನ್ನ ಅದೃಷ್ಟ. ಶ್ರೇಷ್ಠ ನಾಯಕರಾದ ಅವರು ಒಳನೋಟಗಳನ್ನು ತಂಡದೊಂದಿಗೆ ಹಂಚುತ್ತಾರೆ. ಇದು ನಮಗೆ ಪುಳಕ ನೀಡುತ್ತದೆ’ ಎಂದರು.

ಸಹ ಆಟಗಾರ ಪೃಥ್ವಿ ಶಾ ಬಗ್ಗೆ ಮೆಚ್ಚಿರುವ ಧವನ್‌ ‘ಭವಿಷ್ಯದಲ್ಲಿ ಅವರೊಬ್ಬ ಉತ್ತಮ ಕ್ರಿಕೆಟಿಗನಾಗುವ ಲಕ್ಷಣ
ಗಳು ಕಾಣಿಸಿಕೊಳ್ಳುತ್ತಿವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.