ADVERTISEMENT

ಇಂಗ್ಲೆಂಡ್‌ ತಂಡದ ಬಷೀರ್‌ಗೆ ಕೊನೆಗೂ ಭಾರತದ ವೀಸಾ

ಏಜೆನ್ಸೀಸ್
Published 24 ಜನವರಿ 2024, 23:15 IST
Last Updated 24 ಜನವರಿ 2024, 23:15 IST

ಲಂಡನ್: ಇಂಗ್ಲೆಂಡ್‌ ತಂಡದಲ್ಲಿರುವ ಪಾಕ್‌ ಸಂಜಾತ ಸ್ಪಿನ್ನರ್ ಶೋಯೆಬ್ ಬಷೀರ್‌ ಅವರಿಗೆ ಕೊನೆಗೂ ಭಾರತಕ್ಕೆ ತೆರಳಲು ಬುಧವಾರ ವೀಸಾ ನೀಡಲಾಗಿದೆ. ಈ ಮೊದಲು ವೀಸಾ ಸಿಗದ ಕಾರಣ ಬೆನ್‌ ಸ್ಟೋಕ್ಸ್‌ ನೇತೃತ್ವದ ತಂಡದ ಜೊತೆ ಅವರಿಗೆ ಅಬುಧಾಬಿಯಿಂದ ಭಾರತಕ್ಕೆ ಪ್ರಯಾಣಿಸಲು ಆಗಿರಲಿಲ್ಲ.

‘ಶೋಯೆಬ್ ಬಷೀರ್ ಅವರಿಗೆ ಈಗ ವೀಸಾ ನೀಡಲಾಗಿದೆ. ಅವರು ವಾರಾಂತ್ಯದಲ್ಲಿ ಭಾರತದಲ್ಲಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕಗ್ಗಂಟು ಬಗೆಹರಿದಿರುವುದರಿಂದ ಸಂತಸವಾಗಿದೆ’ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್ ಮಂಡಳಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಾಕಿದೆ.

20 ವರ್ಷದ ಬೌಲರ್‌ಗೆ ವೀಸಾ ಸಿಗದೇ ಸಮಸ್ಯೆ ಎದುರಿಸಿದ್ದರಿಂದ ಬೇಸರವಾಗಿತ್ತು ಎಂದು ಇದಕ್ಕೆ ಮೊದಲು ನಾಯಕ ಬೆನ್‌ ಸ್ಟೋಕ್ಸ್ ಹೇಳಿದ್ದರು. ‘ಅಬುದಾಬಿಯಲ್ಲಿ ಈ ವಿಷಯ ಗೊತ್ತಾದಾಗ, ಬಷೀರ್‌ಗೆ ವೀಸಾ ಸಿಗುವವರೆಗೆ ನಾವು ಅಲ್ಲಿಂದ ಹೊರಡಬಾರದು ಎಂದಿದ್ದೆ’ ಎಂದು ಟೆಸ್ಟ್ ಪಂದ್ಯಕ್ಕೆ ಮುನ್ನಾದಿನದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.