ADVERTISEMENT

ಟೀಕೆ, ಚರ್ಚೆಗಳ ಮಧ್ಯೆ ಕುಟುಂಬವನ್ನು ಎಳೆದು ತರಬೇಡಿ: ಮೌನ ಮುರಿದ ಶೊಯೆಬ್ ಮಲಿಕ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 14:54 IST
Last Updated 18 ಜೂನ್ 2019, 14:54 IST
   

ಲಾಹೋರ್: ವಿಶ್ವಕಪ್ ಪಂದ್ಯದಲ್ಲಿ ಭಾರತ- ಪಾಕಿಸ್ತಾನ ಪಂದ್ಯದ ಹಿಂದಿನ ದಿನ ಪಾಕ್ ಕ್ರಿಕೆಟಿಗರು ಹುಕ್ಕಾ ಬಾರ್‌ನಲ್ಲಿ ಸಮಯ ಕಳೆಯುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಅಷ್ಟೊಂದು ಒತ್ತಡದ ಮ್ಯಾಚ್ ಇರುವಾಗ ಪಾಕ್ ಕ್ರಿಕೆಟಿಗರು ಮಜಾ ಮಾಡುತ್ತಿದ್ದಾರೆ ಎಂದು ಪಾಕ್ ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ್ದರು.

ಆದಾಗ್ಯೂ, ಪಾಕ್ ಕ್ರಿಕೆಟಿಗರು ಭಾರತದ ವಿರುದ್ಧದ ಪಂದ್ಯಕ್ಕೆ ಮುನ್ನ ಕರ್ಫ್ಯೂ ಉಲ್ಲಂಘಿಸಿದ್ದಾರೆ ಎಂಬ ವದಂತಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಳ್ಳಿ ಹಾಕಿದೆ. ಈ ಮಧ್ಯೆ ಶೊಯೆಬ್ ಮಲಿಕ್ ಸರಣಿ ಟ್ವೀಟ್ ಮೂಲಕ ತಮ್ಮ ಮೌನ ಮುರಿದಿದ್ದಾರೆ.

ಪಾಕಿಸ್ತಾನದ ಮಾಧ್ಯಮಗಳು ನಮ್ಮ ಪರವಾಗಿ ನಿಲ್ಲುವುದು ಯಾವಾಗ? ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ವರ್ಷಗಳಿಗಿಂತ ಹೆಚ್ಚು ವರ್ಷ ದೇಶಕ್ಕಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆಯೂ ನಾನು ಸ್ಪಷ್ಟೀಕರಣ ನೀಡಬೇಕಾಗಿ ಬಂದಿರುವುದ ದುರದೃಷ್ಟಕರ. ಆ ವಿಡಿಯೂ ಜೂನ್ 13ರದ್ದು, 15ರದ್ದು ಅಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ವದಂತಿಯನ್ನು ಪಿಸಿಬಿ ತಳ್ಳಿ ಹಾಕಿರುವ ವರದಿಯನ್ನು ಲಗತ್ತಿಸಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಭಾರತದ ವಿರುದ್ಧದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಮಲಿಕ್ ವಿರುದ್ಧ ಟೀಕಾ ಪ್ರಹಾರವಾಗಿತ್ತು. ಈ ಬಗ್ಗೆ ಪ್ರತಿತ್ರಿಯಿಸಿದ ಅವರು ಇಂತಾ ಚರ್ಚೆಗಳ ಮಧ್ಯೆ ಕುಟುಂಬವನ್ನು ಎಳೆದು ತರಬೇಡಿ ಎಂದು ಅಭಿಮಾನಿಗಳಲ್ಲಿ ಮತ್ತು ಮಾಧ್ಯಮದವರಲ್ಲಿ ವಿನಂತಿಸಿದ್ದಾರೆ.

ಎಲ್ಲ ಕ್ರೀಡಾಪಟುಗಳ ಪರವಾಗಿ ನಾನು ವಿನಂತಿಸುವುದೇನೆಂದರೆ ನಮ್ಮ ಕುಟುಂಬಗಳ ಬಗ್ಗೆಯೂ ನೀವು ಗೌರವವಿಡಿ. ಈ ರೀತಿಯ ಚರ್ಚೆಗಳಿಗೆ ಕುಟುಂಬವನ್ನು ಎಳೆದು ತರದೇ ಇರುವುದು ಒಳ್ಳೆಯದು ಎಂದು ಶೊಯೆಬ್ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.