ADVERTISEMENT

ಆಸ್ಟ್ರೇಲಿಯಾ ವಿರುದ್ಧ ಸರಣಿ: ಭಾರತ ತಂಡಕ್ಕೆ ಮರಳಿದ ಶ್ರೇಯಾಂಕಾ ಪಾಟೀಲ

ಪಿಟಿಐ
Published 18 ಜನವರಿ 2026, 1:52 IST
Last Updated 18 ಜನವರಿ 2026, 1:52 IST
ಶ್ರೇಯಾಂಕಾ ಪಾಟೀಲ
ಶ್ರೇಯಾಂಕಾ ಪಾಟೀಲ   

ನವದೆಹಲಿ: ಆಫ್ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ ಮತ್ತು ಬ್ಯಾಟರ್‌ ಭಾರತಿ ಫುಲ್ಮಾಲಿ ಅವರು ಭಾರತ ಟಿ20 ಮಹಿಳಾ ತಂಡಕ್ಕೆ ಮರಳಿದ್ದಾರೆ.

ವಿಕೆಟ್ ಕೀಪರ್ ಜಿ. ಕಮಲಿನಿ ಮತ್ತು ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ ಅವರು ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ನಡೆಯುವ ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡದಲ್ಲಿ ಚೊಚ್ಚಲ ಅವಕಾಶ ಪಡೆದಿದ್ದಾರೆ.

15 ಆಟಗಾರ್ತಿಯರ ಏಕದಿನ ತಂಡಕ್ಕೆ ಕಶ್ವಿ ಗೌತಮ್ ಅವರನ್ನು ಸೇರಿಸಲಾಗಿದ್ದು, ವೇಗಿ ಅರುಂಧತಿ ರೆಡ್ಡಿ ಮತ್ತು ಎಡಗೈ ಸ್ಪಿನ್ನರ್ ರಾಧಾ ಯಾದವ್ ಅವರಿಗೆ ಕೊಕ್‌ ನೀಡಲಾಗಿದೆ.

ADVERTISEMENT

ಎರಡೂ ತಂಡಗಳನ್ನು ಹರ್ಮನ್‌ ಪ್ರೀತ್ ಕೌರ್ ಮುನ್ನಡೆಸಲಿದ್ದು, ಸ್ಮೃತಿ ಮಂದಾನ ಉಪನಾಯಕಿಯಾಗಿ ದ್ದಾರೆ. ಫೆ.15ರಿಂದ ಮಾರ್ಚ್ 1ರವರೆಗೆ ಭಾರತ ಮೂರು ಟಿ20 ಮತ್ತು ಅಷ್ಟೇ ಏಕದಿನ ಪಂದ್ಯಗಳನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಲಿದೆ. ಏಕೈಕ ಟೆಸ್ಟ್ ಮಾರ್ಚ್ 6ರಿಂದ 9 ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.