ADVERTISEMENT

ಭಾರತ ತಂಡಕ್ಕೆ ಮರಳಿದ ಬೆನ್ನಲ್ಲೆ ಶ್ರೇಯಸ್ ಅಯ್ಯರ್‌ಗೆ ನಾಯಕತ್ವದ ಜವಾಬ್ದಾರಿ

ಪಿಟಿಐ
Published 5 ಜನವರಿ 2026, 10:24 IST
Last Updated 5 ಜನವರಿ 2026, 10:24 IST
ಶ್ರೇಯಸ್‌ ಅಯ್ಯರ್‌ ಬ್ಯಾಟಿಂಗ್‌ ವೈಖರಿ (ಚಿತ್ರಕೃಪೆ: @BCCI)
ಶ್ರೇಯಸ್‌ ಅಯ್ಯರ್‌ ಬ್ಯಾಟಿಂಗ್‌ ವೈಖರಿ (ಚಿತ್ರಕೃಪೆ: @BCCI)   

ಮುಂಬೈ: ಕಳೆದ ವರ್ಷ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸಂದರ್ಭದಲ್ಲಿ ಗಾಯಗೊಂಡು, ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಭಾರತ ಏಕದಿನ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರು ತಂಡಕ್ಕೆ ಮರಳಿದ್ದಾರೆ. ಈ ನಡುವೆ ಅವರನ್ನು ವಿಜಯ್ ಹಜಾರೆ ಟ್ರೋಫಿಯ ಮುಂದಿನ ಪಂದ್ಯಗಳಿಗೆ ಮುಂಬೈ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ತಪ್ಪಿಸಿಕೊಂಡಿದ್ದ ಅವರು, ಸದ್ಯ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಮಾತ್ರವಲ್ಲ, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

ಗಾಯದ ಸಮಸ್ಯೆಯಿಂದ ವಿಜಯ್ ಹಜಾರೆ ಟ್ರೋಫಿಯ ಬಾಕಿ ಉಳಿದ ಪಂದ್ಯಗಳಿಂದ ಹೊರಬಿದ್ದಿರುವ ಮುಂಬೈ ತಂಡದ ಖಾಯಂ ನಾಯಕ ಶಾರ್ದೂಲ್ ಠಾಕೂರ್ ಅವರ ಬದಲು ತಂಡವನ್ನು ಶ್ರೇಯಸ್ ಅಯ್ಯರ್ ಅವರು ಮುನ್ನಡೆಸಲಿದ್ದಾರೆ.

ADVERTISEMENT

‘ಶಾರ್ದುಲ್ ಗಾಯಗೊಂಡಿರುವುದರಿಂದ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಶಿವಂ ದುಬೆ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರು ಲಭ್ಯರಿದ್ದು, ಶ್ರೇಯಸ್ ಅಯ್ಯರ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ’ ಎಂದು ಸಂಜಯ್ ಪಾಟೀಲ್ ಸೋಮವಾರ ಪಿಟಿಐಗೆ ತಿಳಿಸಿದ್ದಾರೆ.

ಮಂಗಳವಾರ ನಡೆಯಲಿರುವ ಗ್ರೂಪ್ ಸಿ ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿರುದ್ಧ ಹಾಗೂ ಜನವರಿ 8ರಂದು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡವನ್ನು ಶ್ರೇಯಸ್ ಅಯ್ಯರ್ ಅವರು ಮುನ್ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.