ADVERTISEMENT

IND vs AUS: ಶುಭಮನ್ ಗಿಲ್ ಅರ್ಧಶತಕ: ಭೋಜನ ವಿರಾಮಕ್ಕೆ ಭಾರತ 83/1

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 2:48 IST
Last Updated 19 ಜನವರಿ 2021, 2:48 IST
ಶುಭಮನ್ ಗಿಲ್: ಎಎಫ್‌ಪಿ ಚಿತ್ರ
ಶುಭಮನ್ ಗಿಲ್: ಎಎಫ್‌ಪಿ ಚಿತ್ರ   

ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ನಿರ್ಣಾಯಕ ದಿನದಂದು ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಭಾರತ ತಂಡ ಬಳಿಕ ಚೇತರಿಸಿಕೊಂಡು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ.

ಆಸ್ಟ್ರೇಲಿಯಾ ಆರಂಭದಲ್ಲೇ ರೋಹಿತ್ ಶರ್ಮಾ(7) ವಿಕೆಟ್ ಉರುಳಿಸಿದ್ದು, ಇದೀಗ ಜವಾಬ್ದಾರಿ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಮತ್ತು ಶುಭಮನ್ ಗಿಲ್ ಮೇಲೆ ಇದೆ. ಜವಾಬ್ದಾರಿಯುತ ಆಟ ಪ್ರದರ್ಶಿಸಿರುವ ಶುಭಮನ್ ಗಿಲ್ ಅರ್ಧಶತಕ ಸಿಡಿಸಿದ್ದು, ತಂಡವನ್ನು ಗುರಿಯತ್ತ ಕೊಂಡೊಯ್ಯುವ ಹಾದಿಯಲ್ಲಿ ಸಾಗಿದ್ದಾರೆ.

336 ರನ್ ಗೆಲುವಿನ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ್ದ ಭಾರತ ನಿನ್ನೆ ದಿನದಾಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿತ್ತು. ಇವತ್ತು ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. 7 ರನ್ ಗಳಿಸಿದ್ದ ರೋಹಿತ್ ಶರ್ಮಾ, ಕಮ್ಮಿನ್ಸ್ ಬೌಲಿಂಗ್‌ನಲ್ಲಿ ಟಿಮ್ ಪೇನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಒಂದಾದ ಶುಭಮನ್ ಗಿಲ್ ಮತ್ತು ಚೇತೇಶ್ವರ್ ಪೂಜಾರ ಜೋಡಿ 63 ರನ್ ಜೊತೆಯಾಟ ನೀಡಿದ್ದು, ಗುರಿಯತ್ತ ಸಾಗುತ್ತಿದ್ದಾರೆ.

ADVERTISEMENT

ನಿನ್ನೆ ದಿನದಾಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದ್ದ ಭಾರತ ಇವತ್ತು ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. 7 ರನ್ ಗಳಿಸಿದ್ದ ರೋಹಿತ್ ಶರ್ಮಾ, ಕಮ್ಮಿನ್ಸ್ ಬೌಲಿಂಗ್‌ನಲ್ಲಿ ಟಿಮ್ ಪೇನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಒಂದಾದ ಶುಭಮನ್ ಗಿಲ್ ಮತ್ತು ಚೇತೇಶ್ವರ್ ಪೂಜಾರ ಜೋಡಿ 63 ರನ್ ಜೊತೆಯಾಟ ನೀಡಿದ್ದು, ಗುರಿಯತ್ತ ಸಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.