ವಿರಾಟ್ ಕೊಹ್ಲಿ
– ಪಿಟಿಐ ಚಿತ್ರ
ಹೆಡಿಂಗ್ಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ, ನಾನು 5ನೇ ಕ್ರಮಾಂಕದಲ್ಲಿ ಆಡಲಿದ್ದೇನೆ ಎಂದು ಎಂದು ಭಾರತ ತಂಡದ ಉಪನಾಯಕ ರಿಷಭ್ ಪಂತ್ ಬುಧವಾರ ಖಚಿತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ನಿವೃತ್ತಿಯಿಂದಾಗಿ ಭಾರತಕ್ಕೆ 4ನೇ ಕ್ರಮಾಂಕದಲ್ಲಿ ಆಡುವ ಬ್ಯಾಟರ್ ಯಾರೆಂಬ ಗೊಂದಲಕ್ಕೆ ಗಿಲ್ ತೆರೆ ಎಳೆದಿದ್ದಾರೆ.
3ನೇ ಕ್ರಮಾಂಕದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಆದರೆ 4 ಹಾಗೂ 5ನೇ ಕ್ರಮಾಂಕದಲ್ಲಿ ಕ್ರಮವಾಗಿ ಶುಭಮನ್ ಹಾಗೂ ನಾನು ಆಡಲಿದ್ದೇವೆ ಎಂದು ಹೇಳಿದ್ದಾರೆ.
‘ನಾನು ಮತ್ತು ಶುಭಮನ್ ಮೈದಾನದ ಹೊರಗೆ ನಿಜವಾಗಿಯೂ ಉತ್ತಮ ಸ್ನೇಹವನ್ನು ಹೊಂದಿದ್ದೇವೆ. ಮೈದಾನದ ಹೊರಗೆ ಉತ್ತಮ ಸ್ನೇಹಿತರಾಗಿದ್ದರೆ, ಅದು ಅಂತಿಮವಾಗಿ ಮೈದಾನದಲ್ಲೂ ಪ್ರತಿಫಲಿಸುತ್ತದೆ ಎನ್ನುವುದು ನನ್ನ ನಂಬಿಕೆ’ ಎಂದು ಅವರು ಹೇಳಿದ್ದಾರೆ.
ಜೇಮ್ಸ್ ಆ್ಯಂಡರ್ಸನ್ ಹಾಗೂ ಸ್ಟುವರ್ಡ್ ಬ್ರಾಡ್ ನಿವೃತ್ತಿ ಹೊಂದಿರುವುದರಿಂದ ನಮಗೆ ಲಾಭವಾಗಿದೆ. ಅವರನ್ನು ಎದುರಿಸುವುದು ಸವಾಲಿನ ಕೆಲಸ ಎಂದು ಇದೇ ವೇಳೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.