ನಿಸ್ಸಾಂಕ
ಪಿಟಿಐ ಚಿತ್ರ
ಗಾಲೆ: ಆರಂಭ ಆಟಗಾರ ಪಥುಮ್ ನಿಸಾಂಕ ಅವರ ಜೀವನಶ್ರೇಷ್ಠ 187 ರನ್‌ಗಳ ನೆರವಿನಿಂದ ಶ್ರೀಲಂಕಾ ತಂಡ ಮೊದಲ ಟೆಸ್ಟ್‌ನ ಮೂರನೇ ದಿನವಾದ ಗುರುವಾರ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 368 ರನ್ ಬಾರಿಸಿತು. ಆತಿಥೇಯರು ಈಗ ಬಾಂಗ್ಲಾದೇಶ ತಂಡಕ್ಕಿಂತ 127 ರನ್ ಮಾತ್ರ ಹಿಂದೆಯಿದ್ದಾರೆ.
27 ವರ್ಷ ವಯಸ್ಸಿನ ನಿಸಾಂಕ ಶ್ರೀಲಂಕಾ ಇನಿಂಗ್ಸ್‌ಗೆ ಲಂಗರು ಹಾಕಿದ್ದು, ದಿನದಾಟ ಮುಕ್ತಾಯಕ್ಕೆ ಎಂಟು ಓವರುಗಳಿದ್ದಾಗ ನಿರ್ಗಮಿಸಿದರು.
ಇದಕ್ಕೆ ಮೊದಲು, 9 ವಿಕೆಟ್‌ಗೆ 484 ರನ್‌ಗಳೊಡನೆ ಮೂರನೇ ದಿನದಾಟ ಮುಂದುವರಿಸಿದ ಬಾಂಗ್ಲಾದೇಶ 495 ರನ್‌ಗಳಿಗೆ ಆಲೌಟಾಯಿತು. ವೇಗಿ ಅಸಿತ ಫೆರ್ನಾಂಡೊ 86 ರನ್ನಿಗೆ 4 ವಿಕೆಟ್ ಪಡೆದರು.
256 ಎಸೆತಗಳನ್ನೆದುರಿಸಿದ ನಿಸಾಂಕ ಒಂದು ಸಿಕ್ಸರ್, 23 ಬೌಂಡರಿಗಳನ್ನು ಬಾರಿಸಿದರು. ಅನುಭವಿ ದಿನೇಶ್ ಚಾಂದಿಮಲ್ ಜೊತೆ 157 ರನ್ ಸೇರಿಸಿ ತಂಡಕ್ಕೆ ಅಡಿಪಾಯ ಒದಗಿಸಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಬಾಂಗ್ಲಾದೇಶ: 153.4 ಓವರುಗಳಲ್ಲಿ 495; ಶ್ರೀಲಂಕಾ: 93 ಓವರುಗಳಲ್ಲಿ 4 ವಿಕೆಟ್‌ಗೆ 368 (ಪಥುಮ್ ನಿಸಾಂಕ 187, ದಿನೇಶ್ ಚಾಂದಿಮಲ್ 54, ಏಂಜೆಲೊ ಮ್ಯಾಥ್ಯೂಸ್ 39, ಕಮಿಂದು ಮೆಂಡಿಸ್ ಔಟಾಗದೇ 37),
ಶತಕ ಬಾರಿಸಿ ಸಂಭ್ರಮಿಸಿದ ನಿಸಾಂಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.