ADVERTISEMENT

ಮಹಿಳಾ ಏಷ್ಯಾ ಕಪ್‌ ಕ್ರಿಕೆಟ್‌: ವೀಕ್ಷಣೆಗೆ ಉಚಿತ ಪ್ರವೇಶ

ಪಿಟಿಐ
Published 16 ಜುಲೈ 2024, 16:32 IST
Last Updated 16 ಜುಲೈ 2024, 16:32 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಏಷ್ಯಾ ಕಪ್‌ ಮಹಿಳಾ ಕ್ರಿಕೆಟ್‌ ಟೂರ್ನಿಯ ಪಂದ್ಯಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ (ಎಸ್‌ಎಲ್‌ಸಿ) ಘೋಷಿಸಿದೆ. ಶುಕ್ರವಾರದಿಂದ ದಂಬುಲಾದಲ್ಲಿ ಟೂರ್ನಿ ಆರಂಭವಾಗಲಿದೆ.

ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಥಾಯ್ಲೆಂಡ್‌, ಯುಎಇ, ನೇಪಾಳ, ಮಲೇಷ್ಯಾ ಮತ್ತು ಅತಿಥೆಯ ಶ್ರೀಲಂಕಾ ಸೇರಿದಂತೆ ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ADVERTISEMENT

‘ಮಹಿಳೆಯರ ಏಷ್ಯಾ ಕಪ್– 2024 ಇಲ್ಲಿದೆ ಮತ್ತು ಪ್ರವೇಶ ಉಚಿತ!’ ಎಂದು ಎಸ್‌ಎಲ್‌ಸಿ ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಸೆಮಿಫೈನಲ್‌ ಮತ್ತು ಫೈನಲ್‌ ಸೇರಿ ಒಟ್ಟು 15 ಪಂದ್ಯಗಳು ನಡೆಯಲ್ಲಿವೆ. ಶುಕ್ರವಾರ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.