ADVERTISEMENT

ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಮಂದಾನ: 28 ವರ್ಷ ಹಳೆ ರೆಕಾರ್ಡ್ ಬ್ರೇಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2025, 7:32 IST
Last Updated 10 ಅಕ್ಟೋಬರ್ 2025, 7:32 IST
<div class="paragraphs"><p>ಸ್ಮೃತಿ ಮಂದಾನ </p></div>

ಸ್ಮೃತಿ ಮಂದಾನ

   

ಪಿಟಿಐ

ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅವರು, ಅಂತರರಾಷ್ಟ್ರೀಯ ಏಕದಿನ ಮಹಿಳಾ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ್ತಿ ಎಂಬ ಸಾಧನೆ ಮಾಡಿದ್ದಾರೆ.

ADVERTISEMENT

ಇದಕ್ಕೂ ಮೊದಲು ಈ ದಾಖಲೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ದಂತಕಥೆ ಬೆಲಿಂಡಾ ಕ್ಲಾರ್ಕ್ ಅವರ ಹೆಸರಿನಲ್ಲಿತ್ತು. ಅವರು 1997ರಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ 970 ರನ್‌ಗಳಿಸಿದ್ದರು. ಇದು ಇದುವರೆಗೂ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ದಾಖಲಾಗಿದ್ದ ಅತೀ ಹೆಚ್ಚು ರನ್ ಆಗಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಂದಾನ ಬೃಹತ್ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ಗುರುವಾರದ ಪಂದ್ಯದಲ್ಲಿ ಅವರು ಕೇವಲ 23 ರನ್ ಗಳಿಸಿ ಔಟ್ ಆಗಿ ನಿರಾಸೆ ಅನುಭವಿಸಿದ್ದರು. ಆದರೂ 9ನೇ ಓವರ್‌ನಲ್ಲಿ ಅಯಾಬೊಂಗಾ ಖಾಕಾ ಅವರ ಬೌಲಿಂಗ್​​ನಲ್ಲಿ ಸಿಕ್ಸರ್ ಸಿಡಿಸುತ್ತಿದ್ದಂತೆ ಆಸಿಸ್ ದಂತಕಥೆ ಬೆಲಿಂಡಾ ಕ್ಲಾರ್ಕ್ ಅವರ ದಾಖಲೆ ಬ್ರೇಕ್ ಮಾಡಿದರು.

29 ವರ್ಷದ ಸ್ಟಾರ್ ಬ್ಯಾಟರ್, ನಿನ್ನೆಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮೊದಲು 2025 ರಲ್ಲಿ ಆಡಿದ 17 ಇನಿಂಗ್ಸ್‌ಗಳಲ್ಲಿ 59.93ರ ಸರಾಸರಿಯಲ್ಲಿ 4 ಶತಕ ಹಾಗೂ 3 ಅರ್ಧಶತಕ ಸಹಿತ 959 ರನ್ಸ್ ಗಳಿಸಿದ್ದರು.

ಸ್ಮೃತಿ ಮಂದಾನ ತಮ್ಮ ಆಟದ ಮೂಲಕ ಕ್ಲಾರ್ಕ್ ಅವರ 28 ವರ್ಷಗಳ ಹಳೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಸದ್ಯ, ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅವರ ಬ್ಯಾಟ್‌ನಿಂದ ನಿರೀಕ್ಷಿತ ರನ್ ಬರುತ್ತಿಲ್ಲ. ಆದರೂ ಅವರು ಹೊಸ ದಾಖಲೆ ಬರೆಯುವಲ್ಲಿ ಯಶಸ್ವಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.