ADVERTISEMENT

Ind-W vs Ire-W: ವೇಗದ ಶತಕ ಸಿಡಿಸಿ ಹೊಸ ದಾಖಲೆ ಬರೆದ ಸ್ಮೃತಿ ಮಂದಾನಾ

ಏಜೆನ್ಸೀಸ್
Published 15 ಜನವರಿ 2025, 10:34 IST
Last Updated 15 ಜನವರಿ 2025, 10:34 IST
ಸ್ಮೃತಿ ಮಂದಾನಾ ಬ್ಯಾಟಿಂಗ್ ವೈಖರಿ
ಸ್ಮೃತಿ ಮಂದಾನಾ ಬ್ಯಾಟಿಂಗ್ ವೈಖರಿ   

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹಾಗೂ ಅನುಭವಿ ಆರಂಭ ಆಟಗಾರ್ತಿ ಸ್ಮೃತಿ ಮಂದಾನಾ ಅವರು ಐರ್ಲೆಂಡ್ ವಿರುದ್ಧ ಶತಕ ದಾಖಲಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ವೇಗದ ಶತಕದ ಹೊಸ ದಾಖಲೆ ಬರೆದರು.

ಬುಧವಾರ ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಐರ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದರು. ಈ ಹಿಂದೆ ಭಾರತದಲ್ಲಿ ವೇಗದ ಶತಕ ದಾಖಲಿಸಿದ ಕೀರ್ತಿ ಹರ್ಮನ್‌ಪ್ರೀತ್ ಕೌರ್ ಅವರ ಹೆಸರಿನಲ್ಲಿತ್ತು. ಮಂದಾನ ಈ ದಾಖಲೆಯನ್ನು ಮುರಿದರು. ಏಕದಿನ ಪಂದ್ಯಗಳಲ್ಲಿ ಮಂದಾನ 10 ಶತಕಗಳನ್ನು ಸಿಡಿಸಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ಅವರ ದಕ್ಷಿಣ ಆಫ್ರಿಕಾ ವಿರುದ್ಧ 87 ಎಸೆತಗಳಲ್ಲಿ ಶತಕ ಸಿಡಿಸಿದ್ದು ಹಿಂದಿನ ದಾಖಲೆಯಾಗಿತ್ತು. ಮಂದಾನಾ 70 ಎಸೆತಗಳಲ್ಲಿ ಶತಕ ಸಿಡಿಸಿ ಕೌರ್‌ ದಾಖಲೆ ಮುರಿದರು. 

ADVERTISEMENT

ಮಹಿಳಾ ಏಕದಿನ ಪಂದ್ಯಗಳಲ್ಲಿ 15 ಶತಕಗಳನ್ನು ಸಿಡಿಸಿರುವ ಆಸ್ಟ್ರೇಲಿಯಾದ ಮೇಗ್ ಲ್ಯಾನಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ನ್ಯೂಜಿಲ್ಯಾಂಡ್‌ನ ಬೇಟ್ಸ್ 13 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಟ್ಯಾಮಿ ಹಾಗೂ ಭಾರತದ ಮಂದಾನಾ ತಲಾ 10 ಶತಕಗಳನ್ನು ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ. 

ಭಾರತ ಮಹಿಳೆಯರ ವೇಗವಾದ ಶತಕಗಳು...

* ಸ್ಮೃತಿ ಮಂಧಾನಾ: 70 ಎಸೆತಗಳಲ್ಲಿ ಶತಕ (ಐರ್ಲೆಂಡ್ ವಿರುದ್ಧ)
* ಹರ್ಮನ್‌ಪ್ರೀತ್ ಕೌರ್: 87 ಎಸೆತಗಳಲ್ಲಿ ಶತಕ (ದಕ್ಷಿಣ ಆಫ್ರಿಕಾ ವಿರುದ್ಧ)
* ಹರ್ಮನ್‌ಪ್ರೀತ್ ಕೌರ್: 90 ಎಸೆತಗಳಲ್ಲಿ ಶತಕ (ಆಸ್ಟ್ರೇಲಿಯಾ ವಿರುದ್ಧ)
* ಜೆಮಿಮಾ ರೋಡ್ರಿಗ್ಸ್: 90 ಎಸೆತಗಳಲ್ಲಿ ಶತಕ (ಐರ್ಲೆಂಡ್ ವಿರುದ್ಧ)
* ಹಾ.ಡಿಯೋಲ್:  98 ಎಸೆತಗಳಲ್ಲಿ ಶತಕ (ವಿಂಡೀಸ್‌ ವಿರುದ್ಧ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.